ಅಕ್ಷರ ಕಲಿಸುವ ಕೆಲಸ ನಿರಂತರವಾಗಲಿ

ಅಕ್ಷರ ಕಲಿಸುವ ಕೆಲಸ ನಿರಂತರವಾಗಲಿ

ಮಲೇಬೆನ್ನೂರು, ಸೆ.12- ಎದೆಯಲ್ಲಿ ಬಿದ್ದ ಅಕ್ಷರ, ಭೂಮಿಯಲ್ಲಿ ಬಿತ್ತಿದ ಬೀಜ ಇಂದಲ್ಲ, ನಾಳೆ ಫಲ ಕೊಡುತ್ತವೆ ಎಂದು ಸಾವಯವ ಕೃಷಿಕ ಹಾಗೂ ಬರಹಗಾರ ಕುಂದೂರು ಮಂಜಪ್ಪ  ಹೇಳಿದರು.                                     

ಶುಕ್ರವಾರ ಹೊಳೆಸಿರಿಗೆರೆ ಗ್ರಾಮದ ಸುಭಾಷ್‌ಚಂದ್ರ ಬೋಸ್ ಉಸ್ತುವಾರಿ ಮುಂದುವರಿಕೆ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 58ನೇ ಅಂತರರಾಷ್ಟ್ರೀಯ ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಈಗಲೂ ಸಹ ಅನಕ್ಷರಸ್ಥರಿದ್ದಾರೆ. ಆದ್ದರಿಂದ ಅಕ್ಷರ ಕಲಿಸುವ ಹಾಗೂ ಜ್ಞಾನ ಬಿತ್ತುವ ಕೆಲಸ ನಿರಂತರವಾಗಿರಬೇಕು ಎಂದರು.       

ಗ್ರಾ.ಪಂ. ಅಧ್ಯಕ್ಷ ಬಿ. ಶೇಖರಪ್ಪ ಧ್ವಜಾರೋಹಣ ನೆರವೇರಿಸಿ, ಗ್ರಾಮ ಪಂಚಾಯಿತಿಯಿಂದ ಸಾಕ್ಷರತೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಿರಂತರ ಶಿಕ್ಷಣ ಕೇಂದ್ರದ ಉಸ್ತುವಾರಿ ಪ್ರೇರಕ ಎಂ. ಶಿವಕುಮಾರ್  ಸಾಕ್ಷರತೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಗ್ರಾ.ಪಂ. ಸದಸ್ಯರಾದ ಬಿ  ಪ್ರಭು, ವಿನಾಯಕ, ಮಂಜಣ್ಣ ಮತ್ತು ಗ್ರಾಮಸ್ಥರಾದ ಪ್ರಶಾಂತ, ಅನುಸೂಯಮ್ಮ, ಶಕುಂತಲಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!