ಸಿಟಿ ಕೋ-ಆಪರೇಟಿವ್ ಬ್ಯಾಂಕಿಗೆ 13.56 ಲಕ್ಷ ರೂ. ಲಾಭ

ಸಿಟಿ ಕೋ-ಆಪರೇಟಿವ್ ಬ್ಯಾಂಕಿಗೆ 13.56 ಲಕ್ಷ ರೂ. ಲಾಭ

31ನೇ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಎನ್.ಜೆ. ಗುರುಸಿದ್ಧಯ್ಯ ಸಂತಸ

ದಾವಣಗೆರೆ, ಸೆ. 12 – ಯಶಸ್ವಿ 32ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ತನ್ನ ಪ್ರಗತಿಯನ್ನು ಕಾಯ್ದುಕೊಂಡು ಮುನ್ನಡೆಯುವಲ್ಲಿ ಯಶಸ್ವಿ ಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎನ್.ಜೆ. ಗುರುಸಿದ್ಧಯ್ಯ ಸಂತಸ ವ್ಯಕ್ತಪಡಿಸಿದರು.

ಇಲ್ಲಿನ ಶ್ರೀ ಡಾ. ಸದ್ಯೋಜಾತ ಶಿವಾ ಚಾರ್ಯ ಮಹಾಸ್ವಾಮಿಗಳವರ ಹಿರೇಮಠದಲ್ಲಿ ಏರ್ಪಾಡಾಗಿದ್ದ ಸಿಟಿ ಕೋ-ಆಪರೇಟಿವ್ ಬ್ಯಾಂಕಿನ 31ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

2023 ಮಾರ್ಚ್ ಅಂತ್ಯಕ್ಕೆ 2769 ಸದಸ್ಯರಿರುವ ಈ ಬ್ಯಾಂಕ್, 98 ಲಕ್ಷ ರೂ. ಷೇರು ಬಂಡವಾಳ ಹೊಂದಿದೆ.19.50 ಲಕ್ಷ ರೂ. ಠೇವಣಿ ಸಂಗ್ರಹಿಸಿದ್ದು, ಸದಸ್ಯರಿಗೆ ವಿವಿಧ ಉದ್ದೇಶಗಳಿಗನುಗುಣವಾಗಿ 10 ಲಕ್ಷ ರೂ. ಸಾಲ-ಸೌಲಭ್ಯ ಒದಗಿಸುವುದರೊಂದಿಗೆ ಅವರ ಆರ್ಥಿಕ ಸಮಸ್ಯೆಗೆ ಸ್ಪಂದಿಸಲಾಗಿದೆ.

13.56 ಲಕ್ಷ ರೂ. ಲಾಭ ಗಳಿಸಿದ್ದು, `ಬಿ’ ತರಗತಿಯ ಬ್ಯಾಂಕ್ ಎಂದು ವರ್ಗೀಕರಿಸ ಲಾಗಿದೆ ಎಂದು ತಿಳಿಸಿದ ಅವರು, ಸದಸ್ಯರಿಗೆ ಶೇ. 10ರಷ್ಟು ಲಾಭಾಂಶ ನೀಡಲು ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಷೇರುದಾರರ ಚಪ್ಪಾಳೆಗಳ ಮಧ್ಯೆ ಘೋಷಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ನಿರಂಜನ ನಿಶಾನಿ ಮಠ ಮಾತನಾಡಿ, ಬ್ಯಾಂಕಿನ ಪ್ರಗತಿಯನ್ನು ಆಡಳಿತ ಮಂಡಳಿಯ ಕ್ರಿಯಾಶೀಲತೆ, ಸಿಬ್ಬಂದಿ ವರ್ಗದವರ ಪರಿಶ್ರಮ, ಠೇವಣಿದಾರರ ವಿಶ್ವಾಸಾರ್ಹತೆ, ಸದಸ್ಯರ-ಗ್ರಾಹಕರ ನಂಬಿಕೆ, ಸಾರ್ವಜನಿಕರ ಪ್ರೋತ್ಸಾಹವನ್ನು ಪ್ರತಿಬಿಂಬಿ ಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದವರನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದ ನಿರಂಜನ ನಿಶಾನಿಮಠ್, ಇದೇ ಸಹಕಾರ ಮುಂದೆಯೂ ತಮ್ಮ ಬ್ಯಾಂಕಿಗೆ ಇರಲಿ ಎಂದು ಕೇಳಿಕೊಂಡರು. ಲಾಭ ಹಂಚಿಕೆ ವಿಷಯ ಕುರಿತಂತೆ ಹಿರಿಯ ನಿರ್ದೇಶಕ ಬಿ.ಹೆಚ್. ಪರಶುರಾಮಪ್ಪ ಮಾತನಾಡಿದರು. ವ್ಯವಸ್ಥಾಪಕ ಎಂ. ಮಂಜುನಾಥ್ ಅವರು ಲೆಕ್ಕ ಪರಿಶೋ ಧನೆಯ ವರದಿಯನ್ನು ಸಭೆಗೆ ಮಂಡಿಸಿದರು.

ನಿರ್ದೇಶಕರುಗಳಾದ ಕೆ.ಎಸ್. ಮಹೇಶ್ವರಪ್ಪ, ಹೆಚ್.ಎಂ. ವಿಶ್ವನಾಥ್, ಶ್ರೀಮತಿ ಎನ್.ಎಂ. ಪಂಕಜ ವೀರಯ್ಯ, ವಿಕಾಸ್ ಕುಮಾರ್, ಕೆ.ಆರ್. ರವೀಂದ್ರನಾಥ್, ಶ್ರೀಮತಿ ಆರ್. ಕೌಶಲ್ಯ, ವೃತ್ತಿಪರ ನಿರ್ದೇಶಕರುಗಳಾದ ಡಾ. ಎಂ. ಸೋಮ ಶೇಖರಪ್ಪ, ಎಂ.ಎಸ್. ಸುಮಂತ್ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬ್ಯಾಂಕಿನ ಷೇರುದಾರರಾದ ಎಂ.ಕೆ. ಬಕ್ಕಪ್ಪ, ಡಾ. ವೀರಯ್ಯ, ಎನ್.ಜಿ. ಪುಟ್ಟಸ್ವಾಮಿ, ಶ್ರೀಮತಿ ಬಿ. ಸೌಮ್ಯ, ಹೆಚ್.ವಿ. ಮಂಜುನಾಥಸ್ವಾಮಿ, ಎಸ್.ಎನ್. ಪ್ರಕಾಶ್ ಅವರುಗಳು ಮಾತನಾಡಿ, ಬ್ಯಾಂಕಿನ ಸೇವೆಯನ್ನು ಪ್ರಶಂಸಿಸಿದರದಲ್ಲದೇ ಅಭಿವೃದ್ಧಿ ಕುರಿತಂತೆ ಸಲಹೆಗಳನ್ನು ನೀಡಿದರು. ಶ್ರೀಮತಿ ರಕ್ಷಾ ಬಂಡಿವಾಡ ಪ್ರಾರ್ಥಿಸಿದರು. ನಿರ್ದೇಶಕ ಎನ್.ವಿ. ಬಂಡಿವಾಡ ವಂದಿಸಿದರು.

error: Content is protected !!