ಸಿದ್ಧಗಂಗಾ ಶಾಲೆಯಿಂದ ಕಬ್ಸ್-ಬುಲ್ಸ್‌ನವರಿಂದ ಸಿಕ್ಸರ್‌ ಕ್ಯಾಂಪ್

ಸಿದ್ಧಗಂಗಾ ಶಾಲೆಯಿಂದ ಕಬ್ಸ್-ಬುಲ್ಸ್‌ನವರಿಂದ ಸಿಕ್ಸರ್‌ ಕ್ಯಾಂಪ್

ದಾವಣಗೆರೆ, ಸೆ.12- ನಗರದ ಶ್ರೀ ಸಿದ್ಧಗಂಗಾ ಸ್ಕೌಟ್‌ ಗೈಡ್‌ ಸ್ಥಳೀಯ ಸಂಸ್ಥೆ ವತಿಯಿಂದ 310 ಕಬ್ಸ್‌ ಮತ್ತು ಬುಲ್-ಬುಲ್ಸ್‌ ಮಕ್ಕಳಿಗೆ ಶಾಲೆಯ ಆವರಣದಲ್ಲಿ ಸಿಕ್ಸರ್‌ ಕ್ಯಾಂಪ್‌ ನಡೆಸಲಾಯಿತು. 310 ಮಕ್ಕಳು ತಂಡೋಪ ತಂಡವಾಗಿ 20 ತರಬೇತಿ ಪಡೆದ ಶಿಕ್ಷಕ – ಶಿಕ್ಷಕಿಯರ ಮಾರ್ಗದರ್ಶನದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿದರು. 

1 ರಿಂದ 4ನೇ ತರಗತಿಯ ಈ ಮಕ್ಕಳು ರಾತ್ರಿ ಶಿಬಿರಾಗ್ನಿಯಲ್ಲಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಿಕ್ಸರ್‌ ಕ್ಯಾಂಪಿಗೆ ಜಿಲ್ಲಾ ಗೈಡ್‌ ಆಯುಕ್ತರಾದ ಶಾರದಾ ಮಾಗಾನಹಳ್ಳಿ ಮತ್ತು ಸ್ಕೌಟ್‌ ಸ್ವಯಂ ಸೇವಕರಾದ ಆಶ್ವಿನಿ ಭೇಟಿ ನೀಡಿ, ಮಕ್ಕಳ ಕ್ರಿಯಾಶೀಲತೆಯನ್ನು ಮೆಚ್ಚಿದರು. ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಎಡಿಸಿ ರೇಖಾರಾಣಿ, ನಿಕಟ ಪೂರ್ವ ಕಾರ್ಯದರ್ಶಿ ಶಶಿಕಲಾ ಅವರ ನೇತೃತ್ವದಲ್ಲಿ ಶಿಬಿರ ನಡೆಯಿತು.

error: Content is protected !!