ಹರಪನಹಳ್ಳಿ ಜೆಸಿಐ ಸಂಸ್ಥೆಯಿಂದ ಸಮಾಜಮುಖಿ ಕಾರ್ಯಕ್ರಮಗಳು

ಹರಪನಹಳ್ಳಿ ಜೆಸಿಐ ಸಂಸ್ಥೆಯಿಂದ ಸಮಾಜಮುಖಿ ಕಾರ್ಯಕ್ರಮಗಳು

ಹರಪನಹಳ್ಳಿ, ಸೆ.11- ಜೆಸಿಐ ಸಂಸ್ಥೆ ನಿಸ್ವಾರ್ಥವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಜೆಸಿಐ ಹರಪನಹಳ್ಳಿ ಸ್ಫೂರ್ತಿ ಸಂಸ್ಥೆ ಅಧ್ಯಕ್ಷ ಚಲವಾದಿ ಪರಶುರಾಮ್ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ಜ್ಯೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆಯ ಜೆಸಿಐ ವೀಕ್ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೂಲಿ ಕೆಲಸಕ್ಕಾಗಿ ಗುಳೇ ಹೋಗುವ ಪಾಲಕರು, ತಮ್ಮ ಮಕ್ಕಳನ್ನು ವಸತಿ ಶಾಲೆಯಲ್ಲಿ ಬಿಟ್ಟು ಹೋಗಿದ್ದಾರೆ. ಮಕ್ಕಳ ಆರೋಗ್ಯದ ಸಂಪೂರ್ಣ ಜವಾಬ್ದಾರಿ ಶಿಕ್ಷಕರದ್ದು. ಅವರಿಗೆ ಏನಾದರು ಆದರೆ ಶಿಕ್ಷಕರೇ ನೋಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಗೆ ನೆರವಿಗೆ ಬರುವ ಉದ್ದೇಶದಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಕಣ್ಣಿನ ತಜ್ಞೆ ಡಾ.ಸಂಗೀತ ಭಾಗವತ್ ಮತ್ತು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಆದಿತ್ಯ ಅವರು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ಡಾ. ಸಂಗೀತ ಭಾಗವತ್, ಡಾ. ಆದಿತ್ಯ, ರವೀಂದ್ರ ಅಧಿಕಾರ ಮಾತನಾಡಿದರು. 

ಮೋರಿಗೇರಿ ಹೇಮಣ್ಣ, ಶರತ್ ಚಂದ್ರ, ಇರ್ಷಾದ್ ಭಾಷಾ, ಯು.ನಾರಾಯಣ, ಮುಖ್ಯ ಶಿಕ್ಷಕ ಶಿವಕುಮಾರ್‌, ಪುಷ್ಪ, ನರಸಮ್ಮ, ಶಿಕ್ಷಕರು, ವಿದ್ಯಾರ್ಥಿಗಳಿದ್ದರು.

error: Content is protected !!