ಸರ್ಕಾರದ ರೈತ ವಿರೋಧಿ ನೀತಿ ; ಬಿಜೆಪಿ ಪ್ರತಿಭಟನಾ ಮೆರವಣಿಗೆ

ಸರ್ಕಾರದ ರೈತ ವಿರೋಧಿ ನೀತಿ ; ಬಿಜೆಪಿ ಪ್ರತಿಭಟನಾ ಮೆರವಣಿಗೆ

ರಾಣೇಬೆನ್ನೂರು, ಸೆ.11- ಮಳೆಯ ಅಭಾವ ದಿಂದ ಉಂಟಾಗಿರುವ ಬರಗಾಲ, ಕರೆಂಟ್ ಲೋಡ್ ಶೆಡ್ಡಿಂಗ್, ಗ್ಯಾರಂಟಿಗಳಲ್ಲಿ ಅಸಮರ್ಪಕ ವಿತರಣೆ, ರೈತ ಪರ ಯೋಜನೆಗಳ ರದ್ದತಿ ಮುಂತಾದವುಗಳಿಂದ, ಕಾಂಗ್ರೆಸ್ ಸರ್ಕಾರ ನೂರೇ ದಿನಗಳಲ್ಲಿ ರೈತ ವಿರೋಧಿಯೆಂದು ಸಾಬೀತು ಪಡಿಸಿದೆ. ಈ ಸರ್ಕಾರದ ಆಡಳಿತದ ಬಗ್ಗೆ ಜನರಿಗೆ ಬಹಳಷ್ಟು ಅಸಮಾಧಾನ ಉಂಟಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ್ ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ಮುಖಂಡತ್ವ ವಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ,  ತಾಲ್ಲೂಕು ಕಛೇರಿ ಬಳಿ ಮಾತನಾಡಿದರು.

7 ಗಂಟೆಗಳ ಕಾಲ ರೈತರಿಗೆ ಕರೆಂಟ್ ಕೊಡಬೇಕು, ಗ್ಯಾರಂಟಿಗಳು ಕಾಲಕಾಲಕ್ಕೆ ಜನರಿಗೆ ತಲುಪಬೇಕು, ಹೆಚ್ಚಾಗಿರುವ  ರೈತರ ಆತ್ಮಹತ್ಯೆಗಳನ್ನು ತಡೆಯುವಂತಹ  ರೈತ ಪರ ಕಾರ್ಯಕ್ರಮಗಳನ್ನು  ಸರ್ಕಾರ ಈ ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಬಿಜೆಪಿ ಅಧ್ಯಕ್ಷರುಗಳಾದ ಬಸವರಾಜ ಕೇಲಗಾರ, ದೀಪಕಿ ಹರಪನಹಳ್ಳಿ,  ಮುಖಂಡ ರಾದ ಎ.ಬಿ.ಪಾಟೀಲ, ಸೋಮು ಗೌಡಶಿವಣ್ಣ ನವರ,   ಬಸವರಾಜ ಹುಲ್ಲತ್ತಿ, ಪ್ರಕಾಶ ಪೂಜಾರ, ಗಂಗಮ್ಮ ಹಾವನೂರ,  ಕೆ.ಶಿವಲಿಂಗಪ್ಪ,  ಅಮೋಘ ಬದಾಮಿ, ಮಂಜುಳಾ ಹತ್ತಿ, ಮಲ್ಲಣ್ಣ ಅಂಗಡಿ, ಮಂಜುನಾಥ ಓಲೇಕಾರ, ಶೇಖು ನರಸಗೊಂಡರ, ಜಿ.ಜಿ.ಹೊಟ್ಟಿಗೌಡ್ರ ಮತ್ತಿತರರಿದ್ದರು.

error: Content is protected !!