ಹೊನ್ನಾಳಿ ಹಿರೇಕಲ್ಮಠದಲ್ಲಿ 120 ವಟುಗಳಿಗೆ ಶಿವದೀಕ್ಷೆ

ಹೊನ್ನಾಳಿ ಹಿರೇಕಲ್ಮಠದಲ್ಲಿ 120 ವಟುಗಳಿಗೆ ಶಿವದೀಕ್ಷೆ

ಹೊನ್ನಾಳಿ, ಸೆ.11- ಮಧ್ಯ ಕರ್ನಾಟಕದ ಪ್ರಸಿದ್ದ ಹಿರೇಕಲ್ಮಠದಲ್ಲಿ ಶ್ರಾವಣ ಮಾಸದ ಅಂಗ ವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದು ಕೊಂಡು ಬಂದಿದ್ದು, ಭಾನುವಾರ ನೂರಾರು ವೀರಶೈವ ವಟುಗಳಿಗೆ ವಿವಿಧ ಮಠಾಧೀಶ್ವರರ ನೇತೃ ತ್ವದಲ್ಲಿ ಶಿವದೀಕ್ಷಾ ಕಾರ್ಯಕ್ರಮ ನಡೆಸಲಾಯಿತು.  

ಹಿರೇಕಲ್ಮಠದ ಡಾ. ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾರನಹಳ್ಳಿ ರಾಮಲಿಂಗೇಶ್ವರ ಮಠ, ಜಕ್ಕಲಿ, ಹಾಗೂ ಬಿದರಗಡ್ಡೆ ಮಠದ ಸ್ವಾಮೀಜಿ, ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಮತ್ತು ಪುರದ ಸ್ವಾಮೀಜಿಗಳಾದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀಮಠದಲ್ಲಿ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ 104 ಯುವ ವಟುಗಳು ಹಾಗೂ 16 ಮಹಿಳಾ ವಟಗಳು ಒಟ್ಟು 120 ವೀರಶೈವ ವಟುಗಳಿಗೆ ವೀರಶೈವ ಧರ್ಮಾನುಸಾರ ಶಿವದೀಕ್ಷೆ ನೀಡಲಾಯಿತು. 

ಸ್ವಾಮೀಜಿಗಳಿಂದ ಶಿವದೀಕ್ಷೆ ಪಡೆದ ವಟುಗಳು ಶ್ರೀಮಠದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಭಕ್ತರಿಂದ ಕಂತೆ ಭೀಕ್ಷೆ ಪಡೆದು ನಂತರ ಶ್ರೀಮಠಕ್ಕೆ ಆಗಮಿಸಿದರು. 

ಶ್ರಾವಣ ಮಾಸದ ವಿಶೇಷ ಧಾರ್ಮಿಕ ಆಚರಣೆ ಹಿನ್ನಲೆಯಲ್ಲಿ ನಾಳೆ ದಿನಾಂಖ 12ರ ಮಂಗಳವಾರ ಬೆಳಗ್ಗೆ 11.30 ಗಂಟೆಗೆ ಶ್ರೀ ವೀರಭದ್ರ ದೇವರ ಕೆಂಡದಾರ್ಚನೆ ನಡೆಯಲಿದೆ. ನಂತರದಲ್ಲಿ ವಿವಿಧ ಬಣ್ಣದ ಬಾವುಟಗಳು ಹಾಗೂ ಹೂವಿನಿಂದ ಅಲಂಕರಿಸಿದ ರಥದಲ್ಲಿ ಸ್ವಾಮೀಜಿಯವರು ಆಸೀನರಾಗುತ್ತಿದ್ದಂತೆ ಬೆಳಗ್ಗೆ 12 ಗಂಟೆಗೆ ವಿವಿಧ ವಾದ್ಯಮೇಳಗಳು, ಕಲಾ ಮೇಳಗಳೊಂದಿಗೆ ಹಿರೇಕಲ್ಮಠದಿಂದ ಹೊರಟು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಅದ್ದೂರಿ ರಥೋತ್ಸವ ಜರುಗಲಿದೆ.

error: Content is protected !!