ಧರ್ಮಸ್ಥಳ ಟ್ರಸ್ಟ್‌ನ ಯೋಜನೆಗಳು ಸಮಾಜಕ್ಕೆ ಶಕ್ತಿ ನೀಡುತ್ತವೆ

ಧರ್ಮಸ್ಥಳ ಟ್ರಸ್ಟ್‌ನ ಯೋಜನೆಗಳು ಸಮಾಜಕ್ಕೆ ಶಕ್ತಿ ನೀಡುತ್ತವೆ

ಹರಿಹರ, ಸೆ. 10 – ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳು ಸಮಾಜಕ್ಕೆ ಶಕ್ತಿ ನೀಡುತ್ತಿವೆ ಎಂದು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಶ್ರೀ ಶಾರದೇಶಾನಂದಜೀ ಮಹಾರಾಜ್ ಅಭಿಪ್ರಾಯಪಟ್ಟರು.

ನಗರದ ಚಿಂತಾಮಣಿನಗರ ಶ್ರೀ ಸತ್ಯಗಣಪತಿ ದೇವಸ್ಥಾನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು ಗಾಂಧಿನಗರ ವಲಯದ ವತಿಯಿಂದ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ  ಶ್ರೀಗಳು ಮಾತನಾಡಿದರು.

ಧರ್ಮಸ್ಥಳ ಟ್ರಸ್ಟ್ ನಾಡಿನ ಎಲ್ಲಾ ಜಾತಿಯವರನ್ನೊಳಗೊಂಡ ವಿವಿಧತೆ ಯಲ್ಲಿ ಏಕತೆ ಸಾರುವ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದೆ. ಜನರಲ್ಲಿ ಭಕ್ತಿಯ ಭಾವನೆಗಳು ಹೆಚ್ಚಾಗುವುದರ ಜೊತೆಗೆ ಸಂಘಟನೆಗೆ ಶಕ್ತಿ ತುಂಬುತ್ತಿದೆ ಎಂದು ಹೇಳಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಧರ್ಮಸ್ಥಳ ಟ್ರಸ್ಟ್ ಕಾರ್ಯಕ್ರಮಗಳು ಅಸಂಘಟಿತರು ಹಾಗೂ ಮಹಿಳೆಯರು ಸ್ವಾಲವಂಬಿ ಜೀವನ ನಡೆಸಲು ನೆರವಾಗುತ್ತಿವೆ ಎಂದರು.

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಮನೆಯಲ್ಲಿ ಪೋಷಕರು ಮಕ್ಕಳಿಗೆ ನೀಡುವ ಸಂಸ್ಕಾರದಿಂದ ಸಮಾಜ ಸುಧಾರಣೆಯಾಗುತ್ತದೆ ಎಂದರು.

ಉದ್ಯಮಿ ಮತ್ತು ಸತ್ಯಗಣಪತಿ ದೇವಸ್ಥಾನದ ಧರ್ಮದರ್ಶಿ ಎಂ.ಆರ್. ಸತ್ಯನಾರಾಯಣ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ವಿ. ವಿಜಯಕುಮಾರ್ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಗಣಪತಿ ಮಾಳಂಜೆ ಇನ್ನೊಬ್ಬರ ಸಂಕಷ್ಟಕ್ಕೆ, ನೆರವು ನೀಡುವುದೇ ಧರ್ಮ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್, ಕಿರಣ್ ಭೂತೆ, ರಾಜು ರೋಖಡೆ, ಪೂಜೆ ವ್ಯವಸ್ಥಾಪಕರಾದ ನಯನ, ಮೃತ್ಯುಂಜಯ, ಮೇಲ್ವಿಚಾರಕಿ ಶ್ವೇತಾ ಬಿ, ಮಂಜುಳಾ, ಕೊಟ್ರೇಶ್ ರಾಧಾ ಜೋಶಿ,  ಶಾಂತಮ್ಮ, ಆಶಾ ಗುತ್ತೂರು, ಸುಧಾ, ವಿಜಯಶ್ರೀ, ಮಾಲನ್ ಬಿ. ಹೀನಾ, ಗಂಗಮ್ಮ, ರೇಣುಕಮ್ಮ, ಶಿವಾನಂದ, ಶಾಂತಮ್ಮ, ಮೈಲಮ್ಮ, ರಾಧ, ಕವಿತಾ, ಲಕ್ಷ್ಮಮ್ಮ, ಸುಮಾ, ನೀಲಮ್ಮ, ಲತಾ, ಶೋಭಾ, ಉಮಾ, ಆಶ್ವಿನಿ, ಕಮಲಮ್ಮ, ಬಸಮ್ಮ, ಗೀತಾಬಾಯಿ, ಸಾವಿತ್ರ, ಪರಶು ರಾಮ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!