ಫಣಿಯಾಪುರದಲ್ಲಿ ನಟ ಕಿಚ್ಚ ಸುದೀಪ್ ಜನ್ಮ ದಿನ ಸಂಭ್ರಮಾಚರಣೆ

ಫಣಿಯಾಪುರದಲ್ಲಿ ನಟ ಕಿಚ್ಚ ಸುದೀಪ್ ಜನ್ಮ ದಿನ ಸಂಭ್ರಮಾಚರಣೆ

ಹರಪನಹಳ್ಳಿ, ಸೆ.10- ತಾಲ್ಲೂಕಿನ ಫಣಿಯಾಪುರ ಗ್ರಾಮದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ಚಲನಚಿತ್ರ ನಟರು ಹಾಗೂ ಅಂತರರಾಷ್ಟ್ರಿಯ ಮಟ್ಟದಲ್ಲಿ ಬಹುಭಾಷಾ ನಟ ಆಗಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಕೀರ್ತಿ ತಂದುಕೊಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಜನ್ಮ ದಿನವನ್ನು ಗ್ರಾಮದ ಯುವಕರು ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಫಣಿಯಾಪುರ ಲಿಂಗರಾಜ್, ಹನುಮಂತಪ್ಪ, ಸುರೇಶ್, ಬಂಡೆ ನಾಗರಾಜ್, ರಾಜ, ಸುನೀಲ್, ಮಂಜು, ನಾಗರಾಜ್, ರಾಜ, ಚಂದ್ರು, ಹನುಮಂತ, ಅಭಿ, ದೇವೇಂದ್ರ, ಮಂಜಪ್ಪ, ಇತರರು ಉಪಸ್ಥಿತರಿದ್ದರು.

error: Content is protected !!