ಕರುಣಾ ಟ್ರಸ್ಟ್ ಕಾರ್ಯಕ್ರಮದಲ್ಲಿ ಕೆ.ಪಿ. ದೇವರಾಜ್
ದಾವಣಗೆರೆ, ಸೆ. 7- ಆಟೋ ಚಾಲಕರು ಡಿಡಿಟಿ (ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊ) ಡ್ರಿಂಕ್ಸ್ ಮತ್ತು ಟೊಬ್ಯಾಕೊ ಗೆ ಹಣ ದುರ್ವಿನಿಯೋಗ ಮಾಡದೆ, ತಮ್ಮ ಅಮೂಲ್ಯವಾದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ಈಗ ಹೆಚ್ಚು ಜನರು ತಮ್ಮ ಹಣ ಮತ್ತು ಚಾರಿತ್ರ್ಯವನ್ನು ಹಾಳು ಮಾಡಿಕೊಂಡು ಸಾವಿನ ದವಡೆಗೆ ಪ್ರಯಾಣಿಸುತ್ತಿರುವುದು ನೋವಿನ ಸಂಗತಿ. ದಯವಿಟ್ಟು ದುಶ್ಚಟಗಳನ್ನೆಲ್ಲ ಬಿಟ್ಟು ತಮ್ಮ ಆರೋಗ್ಯ, ಆದಾಯ, ಶಾಂತಿ ಹೆಚ್ಚಿಸಿಕೊಳ್ಳಲಿ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶಾಧಿಕಾರಿ ಕೆ.ಪಿ. ದೇವರಾಜ್ ಆಟೋ ಚಾಲಕರನ್ನು ಉದ್ದೇಶಿಸಿ ಮಾತನಾಡಿದರು.
ಕರುಣಾ ಜೀವ ಕಲ್ಯಾಣ ಟ್ರಸ್ಟ್ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ ನಡೆದ `ರಾಷ್ಟ್ರ ನಿರ್ಮಾಣಕ್ಕೆ ತಂಬಾಕು ಮತ್ತಿತರೆ ದುಶ್ಚಟಗಳಿಂದ ದೂರವಿರಿ’ ಎಂಬ ವಿಷಯದ ಬಗ್ಗೆ ಜಾಗೃತಿ ಮೂಡಿ ಸುವ ಕಾರ್ಯಕ್ರಮದಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾ ಮಗಳನ್ನು ಛಾಯಾ ಚಿತ್ರಗಳನ್ನು ತೋರಿಸುವುದರ ಮೂಲಕ ವಿವರಿಸಿದರು.
ಈ ಸಂದರ್ಭದಲ್ಲಿ ತಂಬಾಕನ್ನು ಸಂಪೂರ್ಣವಾಗಿ ಬಿಟ್ಟು ಮಾದರಿ ಜೀವನ ನಡೆಸುತ್ತಿರುವ ಚನ್ನವೀರಸ್ವಾಮಿ ಮತ್ತು ಎಸ್. ರುದ್ರಪ್ಪ ಅವರನ್ನು ಸನ್ಮಾನಿಸಲಾಯಿತು.