ನಾಡಿನ ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸಲು ಪ್ರತಿಭಾ ಕಾರಂಜಿ ಸಹಕಾರಿ

ನಾಡಿನ ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸಲು ಪ್ರತಿಭಾ ಕಾರಂಜಿ ಸಹಕಾರಿ

ಮಲೇಬೆನ್ನೂರು : ಉರ್ದು ಶಾಲಾ ಪ್ರತಿಭಾ ಕಾರಂಜಿಯಲ್ಲಿ ಕೃಷ್ಣಪ್ಪ ಅಭಿಮತ

ಮಲೇಬೆನ್ನೂರು, ಸೆ.7- ಮಕ್ಕಳ ಸರ್ವತೋಮುಖ ಅಭಿವೃದ್ಧಿ ನಾಲ್ಕು ಗೋಡೆಗಳ ಮಧ್ಯ ಆಗುವುದಿಲ್ಲ. ಹಾಗಾಗಿಯೇ ಈ ಪ್ರತಿಭಾ ಕಾರಂಜಿ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿದೆ ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕೃಷ್ಣಪ್ಪ ಹೇಳಿದರು.

ಅವರು ಗುರುವಾರ ಇಲ್ಲಿನ ಶಾದಿಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಮಲೇಬೆನ್ನೂರು ಮತ್ತು ಹರಿಹರ ಕ್ಲಸ್ಟರ್ ಮಟ್ಟದ ಸರ್ಕಾರಿ ಉರ್ದು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ನಾಡಿನ ಸಂಸ್ಕೃತಿ-ಸಂಪ್ರಾಯಗಳನ್ನು ಉಳಿಸಿ, ಬೆಳೆಸುವುದರ ಜೊತೆಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಕೂಡ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶವಾಗಿದೆ. 

ಉರ್ದು ಇಸಿಓಗಳಾದ ಇದಾಯತ್ ಉಲ್ಲಾ ಅನ್ಸಾರಿ, ಶ್ರೀಮತಿ ಇಂಷಾದ್ ಬೇಗಂ ಮಾತನಾಡಿದರು. 

ಹರಿಹರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಚಂದ್ರಪ್ಪ ಮಾತನಾಡಿ, ಪ್ರತಿಭಾ ಕಾರಂಜಿ ಮೂಲಕ ನಮ್ಮ ದೇಶದ ಇತಿಹಾಸ ಹಾಗೂ ಸಾಧನೆಗಳು ಅನಾವರಣಗೊಳ್ಳಲಿವೆ ಎಂದರು.

ಆಶ್ರಯ ಕಾಲೋನಿಯ ಉರ್ದು ಶಾಲಾ ಮುಖ್ಯ ಶಿಕ್ಷಕ ಮಹಮದ್ ಖಲೀಲ್ ವುಲ್ಲಾ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಖಜಾಂಚಿ ರೇವಣಸಿದ್ದಪ್ಪ ಅಂಗಡಿ, ನಿವೃತ್ತ ಶಿಕ್ಷಕ ಸೈಯದ್ ನಜೀರ್ ಅಹಮದ್, ಜಿಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಗುಲಾಬ್ ಜಾನ್, ಮುಖ್ಯ ಶಿಕ್ಷಕ ಶರ್ಮಿಳಾ ಬಾನು, ಶಿಕ್ಷಕರ ಪತ್ತಿನ ಸಂಘದ ನಿರ್ದೇಶಕಿ ಸಯೀದ ಬಾನು, ಸಿಆರ್‌ಪಿಗಳಾದ ಆರೀಫ್ ಬಾನು, ರೇಷ್ಮಾ ಬಾನು, ನಿವೃತ್ತ ಶಿಕ್ಷಕಿ ಸಯೀದ ಬಾನು, ಮುಸ್ಲಿಂ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ಅಶ್ವಕ್ ಅಹ್ಮದ್, ತಾ. ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ನೂರ್ ಅಹಮದ್ ಜಮಖಾನಿ ಸೇರಿದಂತೆ ಇನ್ನೂ ಅನೇಕರು ವೇದಿಕೆಯಲ್ಲಿದ್ದರು.

ಶಿಕ್ಷಕ ಮುಸ್ತಾಕ್ ಅಹಮದ್ ಸ್ವಾಗತಿಸಿದರು. ಶಿಕ್ಷಕ ರಾಜು ಉಲ್ಲಾ ವಂದಿಸಿದರು.

error: Content is protected !!