ಜಿಗಳಿ ಪಿಎಸಿಎಸ್‌ ಅಧ್ಯಕ್ಷರಾಗಿ ಕುಬೇರಸ್ವಾಮಿ, ಉಪಾಧ್ಯಕ್ಷರಾಗಿ ಖಾಸೀಂ ಸಾಬ್‌

ಜಿಗಳಿ ಪಿಎಸಿಎಸ್‌ ಅಧ್ಯಕ್ಷರಾಗಿ ಕುಬೇರಸ್ವಾಮಿ, ಉಪಾಧ್ಯಕ್ಷರಾಗಿ ಖಾಸೀಂ ಸಾಬ್‌

ಮಲೇಬೆನ್ನೂರು, ಸೆ.6- ಜಿಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಡೆಯರ ಬಸಾಪುರದ ಬಿ.ಎಸ್‌. ಕುಬೇರಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ಜಿಗಳಿಯ ಖಾಸೀಂ ಸಾಬ್‌ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುಬೇರಸ್ವಾಮಿ 5 ಮತಗಳನ್ನು ಪಡೆದು ಆಯ್ಕೆಯಾದರೆ, ಸಿ.ಎನ್‌. ಪರಮೇಶ್ವರಪ್ಪ 4 ಮತಗಳನ್ನು ಮತ್ತು ಶ್ರೀಮತಿ ಈರಮ್ಮ ರುದ್ರಗೌಡ ಅವರು 2 ಮತಗಳನ್ನು ಪಡೆದು ಪರಾಭವಗೊಂಡರು.  ಉಪಾಧ್ಯಕ್ಷ ಸ್ಥಾನಕ್ಕೆ ಖಾಸೀಂ ಸಾಬ್‌ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. 

ಡಿ.ಹೆಚ್‌. ಮಂಜುನಾಥ್ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ ಚುನಾವಣಾಧಿಕಾರಿಯಾಗಿದ್ದರು.

error: Content is protected !!