ದಾವಣಗೆರೆ, ಸೆ.6- ನಗರದ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ನ ಬಿ.ಎಸ್.ಸಿ. ಎಕ್ಸ್ಕ್ಲ್ಯೂಸಿವ್ (ಡೆಂಟಲ್ ಕಾಲೇಜು ರೋಡ್ ಶಾಖೆ) ನಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣನ ವೇಷಭೂಷಣ ಸ್ಪರ್ಧೆಯನ್ನು ನಡೆಸಲಾಯಿತು.
ಸ್ಪರ್ಧೆಯಲ್ಲಿ ಸುಮಾರು ನಗರದ 20 ಶಾಲೆಗಳು ಭಾಗವಹಿಸಿದ್ದವು. ಸ್ಪರ್ಧೆಯು 2 ವರ್ಷದ ಮೇಲೆ 6 ವರ್ಷದ ಒಳಗಿನ ಮಕ್ಕಳಿಗೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಸುಮಾರು 100 ಮಕ್ಕಳು ಭಾಗವಹಿಸಿದ್ದರು. ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು ಮತ್ತು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ಪಾರಿತೋಷಕಗಳನ್ನು ನೀಡಲಾಯಿತು. ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ನ ಮಾಲೀಕ ಬಿ.ಸಿ.ಚಂದ್ರಶೇಖರ್, ಗ್ರಾಹಕರು, ಸಾರ್ವಜನಿಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ವೇಷಭೂಷಣ ಸ್ಪರ್ಧೆಯ ತೀರ್ಪುಗಾರರಾಗಿ ಕಲರ್ ಡ್ಯಾನ್ಸ್ ಅಕಾಡೆಮಿಯ ಶಿಕ್ಷಕರಾದ ಪ್ರಸನ್ನ ಹಾಗೂ ಮಲಬಾರ್ ಟೈರ್ ಮಾಲೀಕರಲ್ಲೊ ಬ್ಬರಾದ ರೋಶಿನಿ ಅವರು ನಿರ್ವಹಿಸಿದರು.