`ಸಬ್-ರಿಜಿಸ್ಟ್ರಾರ್ ಕಛೇರಿಗೆ ಸಿಸಿ ಕ್ಯಾಮೆರಾ ಅಳವಡಿಸಿ, ಇಲ್ಲವೇ ನಾವೇ ಹಾಕಿಸುತ್ತೇವೆ ಅನುಮತಿ ನೀಡಿ’

`ಸಬ್-ರಿಜಿಸ್ಟ್ರಾರ್ ಕಛೇರಿಗೆ  ಸಿಸಿ ಕ್ಯಾಮೆರಾ ಅಳವಡಿಸಿ, ಇಲ್ಲವೇ ನಾವೇ ಹಾಕಿಸುತ್ತೇವೆ ಅನುಮತಿ ನೀಡಿ’

ಉಪ ನೋಂದಣಾಧಿಕಾರಿಗೆ ಹೊನ್ನಾಳಿ ಭ್ರಷ್ಟಾಚಾರ ವಿರೋಧಿ ವೇದಿಕೆ ಆಗ್ರಹ

ಹೊನ್ನಾಳಿ,ಸೆ.6- ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ   ಸಿಸಿ ಕ್ಯಾಮೆರಾ ಅಳವಡಿಸಲು ಅನುಮತಿ ನೀಡುವಂತೆ ಭ್ರಷ್ಟಾಚಾರ ವಿರೋಧಿ ವೇದಿಕೆ  ಉಪ-ನೋಂದಣಾಧಿಕಾರಿಗೆ ಮನವಿ ಸಲ್ಲಿಸಿದೆ.

ನಾವುಗಳು ಹಲವು ಬಾರಿ ತಮ್ಮ ಕಛೇರಿಯಲ್ಲಿ ದಸ್ತಾವೇಜು ಬರಹಗಾರರನ್ನು ಹೊರತುಪಡಿಸಿ ಉಳಿದಂತೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಅದನ್ನು ತಡೆಯುವಂತೆ ಹಾಗೂ ಕಛೇರಿಯಲ್ಲಿನ ದಾಖಲೆಗಳ ರಕ್ಷಣೆಯೂ ಸೇರಿದಂತೆ ಎಲ್ಲಾ ವಿಧವಾದ ಅನುಕೂಲತೆ, ಪಾರದರ್ಶಕತೆ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಕೋರಿ ಮನವಿ ನೀಡಿ, ಒಂದು ದಿನದ ಧರಣಿಯನ್ನೂ ಸಹ ಕೈಗೊಂಡಿದ್ದೆವು. ಆದಾಗ್ಯೂ ತಾವುಗಳು ನಮ್ಮ ಮನವಿ ಮತ್ತು ಹೋರಾಟಗಳಿಗೆ ಕಿಂಚಿತ್ತೂ ಬೆಲೆ ಕೊಡದೇ, ಇಲ್ಲಸಲ್ಲದ ಸಬೂಬು ಹೇಳಿ  ದಿವ್ಯ ನಿರ್ಲಕ್ಷ್ಯ ತೋರುತ್ತಿರುವಿರಿ. ತಮ್ಮ ಈ ನಡೆ ಮಧ್ಯವರ್ತಿಗಳಿಗೆ ಮತ್ತು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವಂತಿದೆ.  

ಆದ್ದರಿಂದ ಮುಂದಿನ 15 ದಿನಗಳೊಳಗಾಗಿ ತಮ್ಮ ಕಛೇರಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಬೇಕು. ಇಲ್ಲದಿದ್ದಲ್ಲಿ ನಮ್ಮ ಸಂಘಟನೆಯ ವತಿಯಿಂದಲೇ    ಕಛೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದ್ದೇವೆ  ಎಂದು ಅಧ್ಯಕ್ಷ ಗುರುಪಾದಯ್ಯ ಮಠದ್ ತಿಳಿಸಿದ್ದಾರೆ. 

  ಸಂದರ್ಭದಲ್ಲಿ ವೇದಿಕೆಯ ಮುಖಂಡರುಗಳಾದ, ಹನುಮಂತಪ್ಪ ಸೊರಟೂರು, ರಾಜು ಕಣಗಣ್ಣಾರ್, ಧನಂಜಯ, ಕರವೇ ಅಧ್ಯಕ್ಷ ವಿನಯ್ ವಗ್ಗರ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!