ಜಗಳೂರು ಕ್ಷೇತ್ರದಲ್ಲಿ ಮಳೆ ಕೊರತೆ, `ಬರಪೀಡಿತ’ ಪಟ್ಟಿಗೆ ಸೇರಿಸಲು ಎಸ್.ವಿ. ರಾಮಚಂದ್ರ ಆಗ್ರಹ

ಜಗಳೂರು ಕ್ಷೇತ್ರದಲ್ಲಿ ಮಳೆ ಕೊರತೆ, `ಬರಪೀಡಿತ’ ಪಟ್ಟಿಗೆ ಸೇರಿಸಲು ಎಸ್.ವಿ. ರಾಮಚಂದ್ರ ಆಗ್ರಹ

 ಜಗಳೂರು, ಸೆ. 5 – ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಕೊರತೆ ಉಂಟಾಗಿ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿದ್ದು, ಸರ್ಕಾರ ಕ್ಷೇತ್ರವನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಮಾಜಿ ಶಾಸಕ ಎಸ್. ವಿ. ರಾಮಚಂದ್ರ ಆಗ್ರಪಡಿಸಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರಪೀಡಿತ ತಾಲ್ಲೂಕುಗಳೆಂದು ಶಿಫಾ ರಸ್ಸು ಮಾಡಿದ ಮೊದಲನೇ ಪಟ್ಟಿಯ 116 ತಾಲ್ಲೂ ಕುಗಳು ಮತ್ತು 2ನೇ ಪಟ್ಟಿಯಲ್ಲಿ ಶಿಫಾರಸ್ಸು ಮಾಡಿ ದ 83 ತಾಲ್ಲೂಕುಗಳಲ್ಲಿ ಜಗಳೂರು ತಾಲ್ಲೂಕು ಸೇರ್ಪಡೆಯಾಗಿಲ್ಲ. ಆದರೆ ಅರೆ ನೀರಾವರಿ ಸೌಲಭ್ಯ ಇರುವ ಮಾಯಕೊಂಡ, ನ್ಯಾಮತಿ ಮತ್ತು ಚನ್ನಗಿರಿ ತಾಲ್ಲೂಕುಗಳು ಸೇರ್ಪಡೆಯಾಗಿವೆ.

ನಿಜವಾಗಿಯೂ ಜಿಲ್ಲೆಯಲ್ಲಿ ಹೆಚ್ಚಿನ ಬರ ಪರಿಸ್ಥಿತಿ ಇರುವುದು ಜಗಳೂರು ಕ್ಷೇತ್ರದಲ್ಲಿ, ಬೆಳೆಗಳು ಒಣಗಿ ರೈತರು ಕಂಗಾಲಾಗಿದ್ದಾರೆ. ಕೆಲವೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. ಸರ್ಕಾರದ ಈ ತಾರತಮ್ಯ ಧೋರಣೆ, ರೈತರಿಗೆ ಗಾಯದ ಮೇಲೆ ಬರೆಯದೆ ದಂತಾಗಿದೆ ಎಂದು ರಾಮಚಂದ್ರ ತಿಳಿಸಿದರು.

ಶಾಸಕರು ತಕ್ಷಣವೇ ತುರ್ತು ಗಮನಹರಿಸಿ ಸರ್ಕಾರದ ಗಮನ ಸೆಳೆದು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತವಾಗಿದೆ. ಜಲ ಜೀವನ್ ಮಿಷನ್ ಯೋಜನೆಯ 482 ಕೋಟಿ ರೂಪಾಯಿಗಳ ಕಾಮಗಾರಿಯನ್ನು ಗುತ್ತಿಗೆದಾರರು ಮಾಡಲು ನಿರಾಕರಿಸಿದ್ದಾರೆ. ನಗರೋತ್ಥಾನ ಯೋಜನೆ ಮತ್ತು ಲೋಕೋಪಯೋಗಿ ಇಲಾಖೆ ಯಿಂದ ಆರಂಭಿಸಿದ ಹಲವು ಕೋಟಿಯ ರಸ್ತೆ ಕಾಮ ಗಾರಿಗಳು ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕಾಮಗಾರಿ ಆರಂಭಿಸಲಾಗಿಲ್ಲ. ಅರಸೀಕೆರೆ ಹೋಬಳಿಯ ಎಚ್. ಕೆ.ಡಿ.ಬಿ. ಯೋಜನೆಯ ಕಾಮಗಾರಿಗಳು ಸಹ ಸ್ಥಗಿತಗೊಂಡಿವೆ. ಈ ಬಗ್ಗೆ ನೂತನ ಶಾಸಕರು ಗಮನಹರಿಸಿ, ಗುತ್ತಿಗೆದಾರರು ಮತ್ತು ಅಧಿಕಾರಿಗಳ ಸಭೆ ಕರೆದು, ಎಲ್ಲ ಕಾಮಗಾರಿಗಳನ್ನು ಪ್ರಾರಂಭಿಸಿ ಜನರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಮಾಜಿ ಶಾಸಕರು ಮನವಿ ಮಾಡಿಕೊಂಡರು.

ಕ್ಷೇತ್ರದ ಮಾಜಿ ಶಾಸಕರೂ ಒಬ್ಬರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಪ್ರಶ್ನೆಗೆ  ಪ್ರತಿಕ್ರಿಯಿಸಿದ ರಾಮಚಂದ್ರ ಅವರು, ಹೆಚ್ಚು ಮತ ಪಡೆದಿರುವ ನಾನೇ ಇದ್ದೀನಿ ಬೇರೆಯವರ ಅವಶ್ಯಕತೆ ಇಲ್ಲ. ಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಜೆ.ಎಂ. ಸಿದ್ದೇಶ್ವರ ಅವರೇ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಅವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್. ಸಿ. ಮಹೇಶ್, ಪಟ್ಟಣ ಪಂಚಾ ಯತ್ ಮಾಜಿ ಅಧ್ಯಕ್ಷ ಎಸ್. ಸಿದ್ದಪ್ಪ ಸದಸ್ಯರಾದ ಪಾಪ ಲಿಂಗಪ್ಪ, ದೇವರಾಜ್, ಮುಖಂಡರಾದ ಆರಾಧ್ಯ, ಸತೀಶ್ ನಾಯಕ್, ರಮೇಶ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!