ದಾವಣಗೆರೆ, ಸೆ. 5 – ಆಪ್ಸ್ ಮಾಡೆಲ್ ಮ್ಯಾನೇಜ್ಮೆಂಟ್ ವತಿಯಿಂದ ಚಿಕ್ಕಮಗಳೂರಿನಲ್ಲಿ ನಡೆದ ಮಿಸ್ಟರ್, ಮಿಸಸ್, ಮಿಸ್ ಟೀನ್ ಮಲ್ನಾಡು-2023 ರ ಫ್ಯಾಷನ್ ಶೋನಲ್ಲಿ ನಗರದ ನೇಹಾ ಚನ್ನಗಿರಿ ಅವರು ಪ್ರಥಮ ಸ್ಥಾನ ಗಳಿಸುವ ಮೂಲಕ ನಗರಕ್ಕೆ ಕೀರ್ತಿ ತಂದಿದ್ದಾರೆ.
ರಂಜಿತ್ ಮಲ್ ಗಾಂಧಿ ಕಾರ್ಮಸ್ ಕಾಲೇಜಿನಲ್ಲಿ ಬಿಬಿಎ ಓದುತ್ತಿ ರುವ ಇವರು, ಚನ್ನಗಿರಿ ಮನೆತನದವರಾದ ರಶ್ಮಿ ಮತ್ತು ಭರತ್ ಎಸ್.ಚನ್ನಗಿರಿ ಅವರ ಪುತ್ರಿ. ದೇವಲೀಲಾ ಮತ್ತು ಚನ್ನಗಿರಿ ಸತ್ಯನಾರಾಯಣ ಹಾಗೂ ವಿಜಯಲಕ್ಷ್ಮಿ ಮತ್ತು ಗೋವಿಂದರಾಜ್ ಗುಪ್ತಾ ಅವರ ಮೊಮ್ಮಗಳು