ಹರಪನಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ 4.87ಲಕ್ಷ ಲಾಭ

ಹರಪನಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ 4.87ಲಕ್ಷ ಲಾಭ

ಹರಪನಹಳ್ಳಿ, ಸೆ.4- ಹರಪನಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಪ್ರಸಕ್ತ ಸಾಲಿಗೆ 487364.45 ಲಕ್ಷ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷರಾದ ಹೆಚ್. ನೇತ್ರಾವತಿ ತಿಳಿಸಿದರು.

ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಜನ ಸಭೆಯಲ್ಲಿ ಮಾತನಾಡಿದ ಅವರು, ಆಹಾರ ಧಾನ್ಯ ಮತ್ತು ಸಗಟು ನಿಯಂತ್ರಿತ ಪಡಿತರ ಹಾಗೂ ಇತರೆ ವ್ಯವಹಾರ ಆರಂಭಿಸಲು ಪ್ರಯತ್ನಿಸಲಾಗುವುದು. 

ರೈತರಿಗೆ  ರಸಗೊಬ್ಬರ ಪೂರೈಕೆ ಹೆಚ್ಚಿನ ಪ್ರಮಾಣದಲ್ಲಿ ವ್ಯವಹರಿಸಬೇಕಾಗಿದೆ. ಕಾರಣ ಸಂಘದ ಎಲ್ಲಾ ಸದಸ್ಯರುಗಳು ಮತ್ತು ತಾಲ್ಲೂಕಿನ ಎಲ್ಲಾ ರೈತರು ಸಂಘದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ ಮಾಡಲು ವಿನಂತಿಸಿ ಕೊಳ್ಳುತ್ತೇವೆ. ಸಂಘದಲ್ಲಿ  ರೈತರಿಗೆ ಮತ್ತು ಸದಸ್ಯ ರಗಳ ಅನುಕೂಲಕ್ಕಾಗಿ ಬಂಗಾರದ ಆಭರಣಗಳ ಮೇಲೆ ಸಾಲ ನೀಡಲು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು. 

ಪ್ರಭಾರಿ ಕಾರ್ಯದರ್ಶಿ ಎಚ್.ತಿರುಪತಿ 2022-23ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಕುರಿತು ಮಾಹಿತಿ ನೀಡುವ ವೇಳೆ ಎ ತರಗತಿ ಸದಸ್ಯರು ಮತ್ತು ಬಿ ತರಗತಿ ಸದಸ್ಯರು ಷೇರು ಧನ ಹೆಚ್ಚಿಸಲು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆ ಪ್ರಸ್ತಾಪವನ್ನು ಕೈ ಬಿಡಲಾಯಿತು.

ಹಿರಿಯ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದು ಹಾಗೂ ಹರಪನಹಳ್ಳಿ ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಬರಿ ಪೆಟ್ರೋಲ್ ಬಂಕ್‌ ಆದರೆ ಸಾಲದು. ಜೊತೆಗೆ ಪರಿಸರ ಮಾಲಿನ್ಯ ತಡೆಯಲು ನೈಸರ್ಗಿಕ ಇಂಧನ ಸಿ.ಎನ್.ಜಿ  ಬಂಕ್ ತೆರೆಯುವಂತೆ ಸಲಹೆ ನಿಡಿದರು.

ಉಪಾಧ್ಯಕ್ಷ ಕುಲುಮಿ ಅಬ್ದುಲ್ಲಾ, ನಿರ್ದಶಕರುಗಳಾದ ಬಿ.ಕೆ.ಪ್ರಕಾಶ್‌, ಎಚ್.ತಿಮ್ಮಾನಾಯ್ಕ, ಎಲ್.ಬಿ. ಹಾಲೇಶನಾಯ್ಕ, ಪಿ. ಪ್ರೇಮಕುಮಾರ, ಗಿಡ್ಡಳ್ಳಿ ನಾಗರಾಜ, ತಳವಾರ ಮಂಜಪ್ಪ, ಬಿ.ರೇವಣಸಿದ್ದಪ್ಪ, ಎಂ.ವಿ. ಕೃಷ್ಣ ಕಾಂತ, ಕೆ. ವಿರುಪಾಕ್ಷಪ್ಪ, ವಿ.ಜಿ. ಪ್ರಕಾಶಗೌಡ, ಯು.ಹನುಮಂತಪ್ಪ, ಮಂಜುಳಾ ಮೂರ್ತಿ ನಾಮನಿರ್ದೇಶಕ  ಚಿಕ್ಕೇರಿ ಬಸಪ್ಪ, ಮುಖಂಡ ರುಗಳಾದ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ ಡಿ. ಅಬ್ದುಲ್ ರಹಿಮಾನ್ ಸಾಬ್, ಆಲಮರಸಿಕೇರಿ ಪರಶುರಾಮಪ್ಪ,  ಕಂಚಿಕೇರಿ ಜಯಲಕ್ಷ್ಮಿ. ಗುಂಡಗತ್ತಿ ನೇತ್ರಾವತಿ, ಸೋಗಿ ಇಬ್ರಾಹಿಂ, ಶ್ರಿಕಾಂತ,  ಶಿವಮೂರ್ತಿಯ್ಯ, ತಿರುಕಪ್ಪ, ಪಿ.ಪರಶುರಾಮ ಸೇರಿದಂತೆ ಇತರರು ಇದ್ದರು

error: Content is protected !!