ಹರಿಹರ, ಸೆ. 1 – ನಗರದಲ್ಲಿ ಸಾರ್ವಜನಿಕ ಗಣೇಶ ಮಹೋತ್ಸವ ಸಮಿತಿಯ ವತಿಯಿಂದ ಗಾಂಧಿ ಮೈದಾನದಲ್ಲಿ ಶ್ರೀ ಗಣೇಶ ಮಹೋತ್ಸವವನ್ನು ಇದೇ ದಿನಾಂಕ 18 ರಂದು ಆಚರಿಸಲಾಗುತ್ತದೆ ಎಂದು ಸಮಿತಿಯ ಅಧ್ಯಕ್ಷ ಕೆ.ಜಿ. ಸಿದ್ದೇಶ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೂರ್ತಿ ಪ್ರತಿಷ್ಠಾಪನೆಗಾಗಿ ನಾಡಿದ್ದು ದಿನಾಂಕ 3 ರ ಭಾನುವಾರ ಬೆಳಗ್ಗೆ 10 ಗಂಟೆಗೆ ಹಂದರ ಕಂಬದ ಪೂಜೆಯನ್ನು ಏರ್ಪಡಿಸಲಾಗಿದೆ ಎಂದವರು ತಿಳಿಸಿದರು.
ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಎಸ್. ರಾಮಪ್ಪ , ನಂದಿಗಾವಿ ಶ್ರೀನಿವಾಸ್ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದ ಪೂರ್ ಉಪಾಧ್ಯಕ್ಷರಾಗಿ ಎಲ್ಲಾ ನಗರಸಭೆ ಸದಸ್ಯ ರು, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ನೋಟದರ್, ಕಿರಣ್ ಭೂತೆ, ಪ್ರವೀಣ್ ಕಾರ್ಯ ದರ್ಶಿಯಾಗಿ ಹಾರನಹಳ್ಳಿ ಮಂಜುನಾಥ್, ಎಂ. ಚಿದಾನಂದ ಕಂಚಿಕೇರಿ, ವಿಜಯಕುಮಾರ್ ಖಜಾಂಚಿಯಾಗಿ ಮಂಜುನಾಥ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳ ತಂಡವನ್ನು ರಚಿಸಲಾಗಿದೆ.
ಈ ಬಾರಿ ಗಣೇಶೋತ್ಸವ ಆಚರಣೆ ವೇಳೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವುದರ ಬದಲಾಗಿ, ಚಂದ್ರಯಾನ – 3 ಸಾಧನೆ ಪ್ರದರ್ಶಿಸಲಾಗುವುದು. ಮಹತ್ವದ್ದ ವಿಚಾರಗಳನ್ನು ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ತಿಳಿಸುವ ದೃಷ್ಟಿಯಿಂದ ವಸ್ತು ಪ್ರದರ್ಶನ ಆಯೋಜಿಸಲಾಗುವುದು ಎಂದು ಸಿದ್ದೇಶ್ ಹೇಳಿದರು.
ಸುಮಾರು 13 ದಿನಗಳ ಕಾಲ ಪ್ರತಿಷ್ಠಾಪನೆ ಮಾಡುವ ಚಿಂತನೆಯ ಹೊಂದಿದ್ದು, ಅಗತ್ಯ ವಾದಲ್ಲಿ ಅವಧಿ ವಿಸ್ತರಿಸಲಾಗುವುದು. ವೀಕ್ಷಣೆಗೆ ಯಾವುದೇ ಶುಲ್ಕ ಇಲ್ಲ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ
ಮುಖ್ಯಸ್ಥರಾದ ಸಂತೋಷ ನೋಟದರ್, ಮಂಜುನಾಥ್, ಪ್ರವೀಣ್ ಪವಾರ್, ಎಂ. ಚಿದಾನಂದ ಕಂಚಿಕೇರಿ, ಜಿ.ವಿ. ಪ್ರವೀಣ್, ರಮೇಶ್, ವಿಜಯಕುಮಾರ್, ಅರುಣ್, ನಾರಾಯಣ್ ಮತ್ತಿತರರು ಹಾಜರಿದ್ದರು.