ಹರಿಹರ, ಅ. 1 – ಯುಜಿಡಿ ಮತ್ತು ಜಲಸಿರಿ ಯೋಜನೆಯ ಕಾಮಗಾರಿ ಯಿಂದಾಗಿ ಎಲ್ಲಾ ಬಡಾವಣೆಗಳಲ್ಲಿ ರಸ್ತೆ ಗಳು ಹಾಳಾಗಿವೆ. ರಸ್ತೆ ದುರಸ್ತಿ ವಿಳಂಬ ವಾಗಿದೆ ಎಂದು ಆಕ್ರೋಶಗೊಂಡ ನಗರದ ಆಟೋ ಚಾಲಕರು ಹಾಗೂ ಮಾಲೀಕರು, ನಗರಸಭೆ ಮುಖ್ಯ ದ್ವಾರದ ಮುಂದೆ ಅರೆ ಬೆತ್ತಲೆ ಪ್ರತಿ ಭಟನೆ ನಡೆಸಿದ್ದಾರೆ. ಈ ವೇಳೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಸಿದ್ದಲಿಂಗಸ್ವಾಮಿ, ಅಧ್ಯಕ್ಷ ಮೋಹನ್ ಗೌಡ ಮಾತ ನಾಡಿ, ರಸ್ತೆಗಳು ಹಾಳಾಗಿರುವು ದರಿಂದ ವೃದ್ದರು, ಶಾಲಾ ಮಕ್ಕಳು, ಗರ್ಭಿಣಿ ಮಹಿಳೆ ಯರಿಗೆ ಸಾಕಷ್ಟು ತೊಂದರೆಯಾಗಿದೆ. ಪ್ರತಿನಿತ್ಯ ಅವ ಘಡಗಳು ಸಂಭವಿಸುತ್ತಿವೆ ಎಂದರು.
ಪೌರಾಯುಕ್ತ ಐಗೂರು ಬಸವರಾಜ್ ಮಾತನಾಡಿ, ನಗರಸಭೆಗೆ ನಾಲ್ಕನೇ ಹಂತದಲ್ಲಿ 19 ಕೋಟಿ ರೂ. ಹಾಗೂ ಹಿಂದೆ ಬಿಡುಗಡೆ ಆಗಿ ವಾಪಸ್ಸು ಹೋಗಿದ್ದ 8 ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆ ಹಣದಿಂದ ಮುಂದಿನ ಸೋಮವಾರದಿಂದ ಶೇ. 70 ರಷ್ಟು ನಗರದ ಪ್ರಮುಖವಾದ ರಸ್ತೆಯನ್ನು ದುರಸ್ತಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಾಪೂರ್, ಉಪಾಧ್ಯಕ್ಷ ಕೆ.ಜಿ. ಸಿದ್ದೇಶ್, ನಗರಸಭೆ ಸದಸ್ಯರಾದ ಹನುಮಂತಪ್ಪ, ಆರ್.ಸಿ. ಜಾವೇದ್, ಮುಖಂಡ ದಾದಾಪೀರ್ ಭಾನುವಳ್ಳಿ, ಆಟೋ ಚಾಲಕರಾದ ನಾಗರಾಜ್, ಚಂದ್ರಪ್ಪ, ಹನುಮಂತಪ್ಪ, ಬಸವರಾಜಪ್ಪ, ಮುನ್ನಾಬಾಯಿ, ಸೋಮಣ್ಣ, ಆಮ್ಜದ್ ಶರೀಫ್, ನಜೀರ್ ಸಾಬ್, ತಿಪ್ಪೇಶ್, ಚಂದ್ರಶೇಖರ್ ಇತರರು ಹಾಜರಿದ್ದರು.