ದಾವಣಗೆರೆ ಸೆ. 1 – ಶ್ರೀ ವಿನಾಯಕ ಎಜುಕೇಷನ್ ಸೊಸೈಟಿಯ ಶ್ರೀ ಮೌನೇಶ್ವರಿ ಕಿವುಡ ಮತ್ತು ಮೂಕ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಉಡುಪಿಯಲ್ಲಿ ಕಳೆದ ವಾರ ಜರುಗಿದ ಕರ್ನಾಟಕ ರಾಜ್ಯ ಕಿವುಡರ 13ನೇ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ 11 ಚಿನ್ನ, 9 ಬೆಳ್ಳಿ ಮತ್ತು 10 ಕಂಚು ಪದಕಗಳನ್ನು ಗಳಿಸುವುದರ ಜೊತೆಗೆ 2ನೇ ಸ್ಥಾನದಲ್ಲಿ ಚಾಂಪಿಯನ್ ಶಿಪ್ ಟ್ರೋಪಿ ಪಡೆದಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಹಾಗೂ ಸಂಸ್ಥೆಯ ಕಾರ್ಯದರ್ಶಿ ಹೆಚ್.ವಿ. ಗೋಪಾಲಪ್ಪ ಅಭಿನಂದಿಸಿದ್ದಾರೆ.
ಮೌನೇಶ್ವರಿ ಕಿವುಡ – ಮೂಕ ಮಕ್ಕಳ ವಸತಿಯುತ ಶಾಲೆಯ ಸಾಧನೆ
