ದಾವಣಗೆರೆ, ಸೆ. 1- ಸಹಕಾರ ಭಾರತಿ ಸಹಕಾರ ಸಂಘಗಳ ಅಧ್ಯಕ್ಷರ-ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳ ಕಾರ್ಯಾಗಾರವು ನಗರದ ಬಂಟರ ಭವನದಲ್ಲಿ ನಡೆಯಿತು.
ರಾಷ್ಟ್ರೀಯ ಅಧ್ಯಕ್ಷ ಬಿ.ಹೆಚ್.ಕೃಷ್ಣಾರೆಡ್ಡಿ ಮಾತನಾಡಿ, ಸಹಕಾರ ಭಾರತಿ ಕಾರ್ಯನಿರ್ವಹಣೆ, ಆಡಿಟ್ ಬಗ್ಗೆ ಮಾಹಿತಿ ನೀಡಿದರು.
ಮಧ್ಯೆ ಕ್ಷೇತ್ರಿಯ ಸಂಪರ್ಕ ಪ್ರಮುಖ ಸತೀಶ್ ಚಂದ್ರ ಮಾತನಾಡಿ, ಒಟ್ಟಿಗೆ ಬಾಳೋಣ, ಒಟ್ಟಿಗೆ ದುಡಿಯೋಣ, ಒಟ್ಟಿಗೆ ಇರೋಣ ಎಂಬ ತತ್ವದಿಂದ ಆಯ್ಕೆಯಾದ ಮಂಡಳಿಯಿಂದ ಮಾತ್ರ ಉತ್ತಮ ಸಂಸ್ಥೆ ಮುಂದೆ ಸಾಗುತ್ತದೆ ಎಂದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಜಿ.ಎನ್. ಸ್ವಾಮಿ, ರಾಷ್ಟ್ರೀಯ ಸಂರಕ್ಷಕ ರಮೇಶ್ ವೈದ್ಯ, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಅಧ್ಯಕ್ಷ ನಂಜನಗೌಡ್ರು, ನಿರ್ದೇಶಕ ಪ್ರಭುದೇವ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಬಿ. ಅಣ್ಣೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಜಿ. ಸಂತೋಷ್, ಜಿಲ್ಲಾ ಕೋಶಾಧ್ಯಕ್ಷ ಉಮೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ರವಿ ಮತ್ತಿತರರು ಭಾಗವಹಿಸಿದ್ದರು.