ದಾವಣಗೆರೆ, ಸೆ. 1 – ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಆದ್ಯತೆ ನೀಡಬೇಕಾಗಿದೆ. ಪ್ಲಾಂಟೇಷನ್ ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು ಎಂದು ದಾವಣಗೆರೆಯ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಉಮಾ ಪ್ರಶಾಂತ್ ಹೇಳಿದರು. ರೋಟರಿ ಕ್ಲಬ್ ದಾವಣಗೆರೆ ವತಿಯಿಂದ ಪೊಲೀಸ್ ಕ್ವಾರ್ಟರ್ಸ್ ಅಂಗಳದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.
ರೋಟರಿ ಕ್ಲಬ್ ಸದಸ್ಯರು, ಇನ್ನರ್ವ್ಹೀಲ್ ಸದಸ್ಯರು ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸುಮಾರು 50 ವಿವಿಧ ಜಾತಿಯ ಗಿಡಗಳನ್ನು ಪೊಲೀಸ್ ಕ್ವಾರ್ಟರ್ಸ್ ಅಂಗಳದಲ್ಲಿ ನೆಡಲಾಯಿತು. ದಾವಣಗೆರೆ ಜಿಲ್ಲಾ ಎಸ್ಪಿ ಶ್ರೀಮತಿ ಉಮಾ ಪ್ರಶಾಂತ್, ರೋಟರಿ ಕ್ಲಬ್ ದಾವಣಗೆರೆಯ ಅಧ್ಯಕ್ಷೆ ಕುಸುಮಾ ವಿಜಯಾನಂದ್, ಕಾರ್ಯದರ್ಶಿ ಸುನೀತಾ ಮೃತುಂಜಯ, ಇನ್ನರ್ವ್ಹೀಲ್ ಅಧ್ಯಕ್ಷೆ ಆಶಾ ಜಗದೀಶ್ ಬೇತೂರ್, ಕಾರ್ಯದರ್ಶಿ ಡಾ. ಚೈತಾಲಿ, ಸಹಾಯಕ ಗವರ್ನರ್ ಅಂದನೂರು ಆನಂದ ಕುಮಾರ್ ಮತ್ತು ಹಿರಿಯ ರೋಟರಿ ಸದಸ್ಯ ಎಸ್.ಕೆ. ವೀರಣ್ಣ, ಆರ್.ಎಸ್.ವಿಜಯಾನಂದ್, ಆರ್.ಟಿ. ಮೃತ್ಯುಂಜಯ, ಜಗದೀಶ್ ಬೇತೂರ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ, ಮಾಜಿ ಕಾರ್ಪೊರೇಟರ್ ದಿನೇಶ್ ಶೆಟ್ಟಿ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಸಿ ನೆಡುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.