ಅಭ್ಯಾಸಕ್ಕೆ ಆಯ್ದುಕೊಂಡ ವಿಷಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿ

ಅಭ್ಯಾಸಕ್ಕೆ ಆಯ್ದುಕೊಂಡ ವಿಷಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿ

ರಾಣೇಬೆನ್ನೂರು ಬಿಎಜೆಎಸ್‌ಎಸ್ ಕಾಲೇಜು ಕಾರ್ಯಕ್ರಮದಲ್ಲಿ ದಾವಣಗೆರೆ ವಿವಿ  ಡಾ. ಕೆ.ವೆಂಕಟೇಶ್ ಸಲಹೆ 

ರಾಣೇಬೆನ್ನೂರು, ಆ.31- ಇಂದಿನ ವಿದ್ಯಾರ್ಥಿಗಳು ಅಭ್ಯಾಸಕ್ಕೆ  ಆಯ್ದುಕೊಂಡ ವಿಷಯವನ್ನು ಬಹಳ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು.ಆಗ ನೀವು ಕಂಡ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತದೆ  ಎಂದು   ಶಿವಗಂಗೋತ್ರಿ ದಾವಣ ಗೆರೆ ವಿಶ್ವವಿದ್ಯಾಲಯದ   ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ   ಡಾ. ಕೆ ವೆಂಕಟೇಶ್  ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. 

ಇಲ್ಲಿನ ಬಿಎಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ 2022-23ನೇ ಸಾಲಿನ ಎನ್ಎಸ್‍ಎಸ್, ರೆಡ್‍ಕ್ರಾಸ್, ರೆಡ್ ರಿಬ್ಬನ್ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ವಿದ್ಯಾರ್ಥಿನಿಯರ ಒಕ್ಕೂಟದ ಕಾರ್ಯ ಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.  

ಪ್ರತಿನಿತ್ಯ ಅಧ್ಯಯನದ ಪ್ರಯತ್ನಗಳು ನಡೆಯುತ್ತಲೇ ಇರಬೇಕು, ಇದರ ಜೊತೆ ಜೊತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ಅರಿತು ಕೊಂಡು, ಅದನ್ನು ಬೆಳೆಸಿಕೊಂಡು ಹೋಗಬೇಕು.   ಪ್ರಸ್ತುತ  ದಿನಮಾನಗಳಲ್ಲಿ ಅಧ್ಯಯನಕ್ಕೆ ಹಲವಾರು ರೀತಿಯ ಸಂಪನ್ಮೂಲಗಳು ಲಭಿಸುತ್ತವೆ, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು, ನಿಮ್ಮ ಇಚ್ಛೆಯ ವಿಷಯವನ್ನು ಮನಃಪೂರ್ವಕವಾಗಿ ಓದಬೇಕು. ಹಲವಾರು ವಿಭಿನ್ನ ರೀತಿಯಲ್ಲಿ ಉದ್ಯೋಗ ಅವಕಾಶ ಗಳಿದ್ದು,  ವಿದ್ಯಾರ್ಥಿನಿಯರು ಹೆಚ್ಚು ಹೆಚ್ಚು ವೃತ್ತಿಪರ ಕೌಶಲ್ಯ  ಹಾಗೂ ವೃತ್ತಿಪರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು   ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಯಾವ ಸಾಧಕರೂ  ಸಹ ಸುಲಭವಾಗಿ ದೊಡ್ಡ ಸ್ಥಾನಕ್ಕೆ ಹೋಗಿಲ್ಲ,   ಗುರಿಯನ್ನು ಮುಟ್ಟಲು ಛಲ ಬಿಡದೆ ಪ್ರಯತ್ನಿಸಿ ಸಾಧಿಸಬೇಕು.  ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಮತ್ತೇನನ್ನಾದರೂ ತ್ಯಾಗ ಮಾಡಬೇಕಾಗುತ್ತದೆ ಎಂದು  ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್. ಎಂ. ಕುಬೇರಪ್ಪ   ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ.ಸುರೇಶ ಬಣಕಾರ ವಹಿಸಿದ್ದರು. ಪ್ರೊ.ಕೆ. ಕೆ. ಹಾವಿನಾಳ, ಪ್ರೊ. ಎಚ್. ಎ. ಭಿಕ್ಷಾವರ್ತಿಮಠ, ಪ್ರೊ.ದೇವರಾಜ ಹಂಚಿನಮನಿ, ಪ್ರೊ. ಸಂತೋಷ ಭಜಂತ್ರಿ,   ಪುಷ್ಪಾಂಜಲಿ ಕಾಂಬಳೆ, ಪ್ರೊ. ರಾಜೀವ್ ಎಂ, ಡಾ.ರವೀಂದ್ರಕುಮಾರ ಬಣಕಾರ. ಪ್ರೊ. ಬಿ. ಯು. ಮಾಳೇನಹಳ್ಳಿ, ಪ್ರೊ.ಪೃಥ್ವಿರಾಜ್ ಕಟ್ಟಿಮನಿ, ಪ್ರೊ.ಸುನೀಲ ಹಿರೇಮನಿ, ಪ್ರೊ.ಚಂದ್ರಶೇಖರ ಎಂ. ಕೆ., ಡಾ.ಹನುಮಂತಪ್ಪ ಬ್ಯಾಡಗಿ, ಪ್ರೊ. ಪ್ರವೀಣ ಕುರುವತ್ತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಆಸುಬಾನು ಸ್ವಾಗತಿಸಿದರು. ಪೂಜಾ ಹೆಗಡೆ ನಿರೂಪಿಸಿದರು.  ಲತಾ ಮಠದ ವಂದಿಸಿದರು.  

error: Content is protected !!