ಭಕ್ತಿ – ಭಾವದಿಂದ ಸಂಸ್ಕಾರ – ಸಂಸ್ಕೃತಿಯೂ ಸಾಧ್ಯ

ಭಕ್ತಿ – ಭಾವದಿಂದ ಸಂಸ್ಕಾರ – ಸಂಸ್ಕೃತಿಯೂ ಸಾಧ್ಯ

ಭಕ್ತಿ - ಭಾವದಿಂದ ಸಂಸ್ಕಾರ - ಸಂಸ್ಕೃತಿಯೂ ಸಾಧ್ಯ - Janathavaniಮಲೇಬೆನ್ನೂರು : ಮೂಲ ಬಸವಣ್ಣನ ದೇವಸ್ಥಾನದ ಕಳಸಾರೋಹಣದಲ್ಲಿ ರಟ್ಟಿಹಳ್ಳಿ ಶ್ರೀಗಳು

ಮಲೇಬೆನ್ನೂರು, ಆ. 31- ಪಟ್ಟಣದ ಪೇಟೆ ಬೀದಿಯಲ್ಲಿರುವ ಶ್ರೀ ಮೂಲ ಬಸವೇಶ್ವರ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರಮಗಳು ಗುರುವಾರ ರಟ್ಟಿಹಳ್ಳಿಯ ಕಬ್ಬಿಣ ಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದವು.

ಈ ವೇಳೆ ಆಶೀರ್ವಚನ ನೀಡಿದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ದೇವಸ್ಥಾನಕ್ಕೆ ಗೋಪುರ ಹಾಗೂ ಕಳಸ ಎರಡೂ ಬಹಳ ಮುಖ್ಯವಾದವು. ಗೋಪುರ, ಕಳಸ ಇಲ್ಲದಿದ್ದರೆ ಆ ದೇವಸ್ಥಾನಕ್ಕೆ ಕಳೆ ಇರುವುದಿಲ್ಲ. ಎಲ್ಲಾ ಧರ್ಮದ ಆಚರಣೆಗಳಲ್ಲಿ ಕಳಸಗಳು ಇದ್ದೇ ಇರುತ್ತವೆ. ಅಷ್ಟೊಂದು ಮಹತ್ವ ಕಳಸಕ್ಕೆ ಇರುತ್ತದೆ ಎಂದರು.

ದೇವಸ್ಥಾನ, ಮಠ-ಮಂದಿರಗಳು ಜನರಲ್ಲಿ ಧಾರ್ಮಿಕ ಪ್ರಜ್ಞೆ ಹೆಚ್ಚಿಸುವ ಜೊತೆಗೆ ಭಕ್ತಿ-ಭಾವಗಳನ್ನು ಬೆಳೆಸುತ್ತಿವೆ. ಭಕ್ತಿ-ಭಾವ ಇದ್ದರೆ ಸಂಸ್ಕಾರ-ಸಂಸ್ಕೃತಿ ಇರುತ್ತದೆ ಎಂದು ಸ್ವಾಮೀಜಿ ಹೇಳಿದರು. 

ಶ್ರೀ ಬೀರಲಿಂಗೇಶ್ವರ, ಶ್ರೀ ಬಸವೇಶ್ವರ, ಶ್ರೀ ಆಂಜನೇಯ ಸ್ವಾಮಿ ದೇವರುಗಳ ಸಾನ್ನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದ ಯಶಸ್ಸಿಗಾಗಿ ಬಿ. ಚಿದಾನಂದಪ್ಪ, ಪೂಜಾರ್ ಬಸಪ್ಪ, ಪಿ. ಗಂಗೇನಳ್ಯೆಪ್ಪ, ತಳಸದ ರೇವಣಸಿದ್ದಪ್ಪ, ವೈ. ನಾರಪ್ಪ, ಕೆ.ಜಿ. ಪರಮೇಶ್ವರಪ್ಪ, ತಳಸದ ಬಸವರಾಜ್, ಕೆ.ಪಿ. ಗಂಗಾಧರ್, ತಳಸದ ಜಯಣ್ಣ, ಹಾಲೇಶ್, ನವೀನ್, ತಳಸದ ಮಂಜುನಾಥ್, ಸೊಪ್ಪಿನ ಮಂಜುನಾಥ್, ಸೊಪ್ಪಿನ ರೇವಣಸಿದ್ದಪ್ಪ, ರಾಮಣ್ಣ ಮೇಷ್ಟ್ರು, ಕಲ್ಪನಹಳ್ಳಿ ಶಿವು, ತಳಸದ ಸಿದ್ದೇಶ್, ಓ. ಶೇಖರ್, ಎಸ್. ಮಲ್ಲಿಕಾರ್ಜುನ್, ತಳಸದ ಸಂತೋಷ್, ಸಿ. ಬಸವರಾಜ್, ವಿನಾಯಕ, ಅಭಿ, ಅಶೋಕ್, ಪ್ರಕಾಶ್‌ಚಾರ್ ಸೇರಿದಂತೆ ಅನೇಕರು ಹಾಜರಿದ್ದು ಶ್ರಮಿಸಿದರು.

ನಿಟ್ಟೂರು ಮಲಕಪ್ಪ ಮತ್ತು ಸಹೋದರರು ಅನ್ನ ದಾಸೋಹಿಗಳಾಗಿದ್ದರು. 

ಅಮೃತ ಪಶು ಆಹಾರ ಅಂಗಡಿಯ ಸಿ. ಬಸವರಾಜ್ ಅವರು ನೂತನ ಕಳಸವನ್ನು ಕೊಡುಗೆಯಾಗಿ ನೀಡಿದ್ದರು. ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್, ಹುಳ್ಳಳ್ಳಿ ಸಿದ್ದೇಶ್, ಉಡೇದರ ಸಿದ್ದೇಶ್, ವೈ. ವಸಂತ್, ಮುದೇಗೌಡ್ರ ತಿಪ್ಪೇಶ್, ಪಿ.ಹೆಚ್. ಶಿವಕುಮಾರ್, ಶಿಕ್ಷಕ ಕುಮಾರ್, ಮೆಡಿಕಲ್ ಶಾಪ್ ರಾಜೀವ್, ಪಾಳೇಗಾರ್ ನಾಗರಾಜ್ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

error: Content is protected !!