ಯುನೈಟೆಡ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಕಾನೂನು ಅರಿವು

ಯುನೈಟೆಡ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಕಾನೂನು ಅರಿವು

ದಾವಣಗೆರೆ, ಆ. 31- ಯುನೈಟೆಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪೋಕ್ಸೋ ಕಾನೂನು ಅರಿವು ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ   ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ವಕೀಲರಾದ ಅಲ್ಫತ ನಿಜಾಮುದ್ದೀನ್ ಉಪಸ್ಥಿತರಿದ್ದು, ಪೋಕ್ಸೋ ಕಾನೂನಿನಲ್ಲಿರುವ ಮಾಹಿತಿಯನ್ನು ಮಕ್ಕಳಿಗೆ ಮನವರಿಕೆ ಮಾಡಿದರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ಬಿ. ದಾದಾಪೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಂಶುಪಾಲ ಎಂ. ವಾಸೀಂ ಪಾಷಾ ಸೇರಿದಂತೆ ಇತರರು  ಭಾಗವಹಿಸಿದ್ದರು‌. ಕನ್ನಡ ಶಿಕ್ಷಕ ಜೆ. ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು.

error: Content is protected !!