ಹರಪನಹಳ್ಳಿ, ಆ.30- ತಾಲ್ಲೂಕಿನ ಕೆ. ಕಲ್ಲಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಬುಧವಾರ ಆಯೋಜಿಸಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ನೇರ ಪ್ರಸಾರ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಟಿ.ಹೊನ್ನಮ್ಮ ಕರಿಯಪ್ಪ, ಉಪಾಧ್ಯಕ್ಷೆ ಭೋವಿ ದುರುಗಮ್ಮ, ಪಿಡಿಒ ಕೆ. ಆನಂದನಾಯ್ಕ್, ಸದಸ್ಯರಾದ ನಾಗೇಂದ್ರಪ್ಪ, ದ್ಯಾಮಪ್ಪ, ಎ.ನಿಂಗಪ್ಪ, ಯಲ್ಲಪ್ಪ ಡಿ., ಬಸವರಾಜ, ಪುಷ್ಪವತಿ ರಾಜಪ್ಪ, ನೀಲಮ್ಮ ಮತ್ತು ಇತರರು ಉಪಸ್ಥಿತರಿದ್ದರು.
ಹರಪನಹಳ್ಳಿ : ಗೃಹಲಕ್ಷ್ಮಿ ಯೋಜನೆಯ ನೇರ ಪ್ರಸಾರ
