ಹರಿಹರದ ಆರೋಗ್ಯಮಾತೆ ಉತ್ಸವಕ್ಕೆ ಎಸ್ಸೆಸ್ಸೆಂ ಚಾಲನೆ

ಹರಿಹರದ ಆರೋಗ್ಯಮಾತೆ ಉತ್ಸವಕ್ಕೆ ಎಸ್ಸೆಸ್ಸೆಂ ಚಾಲನೆ

ಹರಿಹರ, ಅ.30 – ನಗರದ ಆರೋಗ್ಯಮಾತೆ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಹರಿಹರ ಮಾತೆಯ ಈ ಪುಣ್ಯಕ್ಷೇತ್ರವು ಕ್ರೈಸ್ತರ ಅತ್ಯಂತ ಪ್ರಮುಖ ಶ್ರದ್ಧಾ ಕೇಂದ್ರವಾಗಿದೆ. ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ರಾಜ್ಯದ ಅನೇಕ ಭಾಗಗಳಿಂದ ಭಕ್ತರು ಭಾಗವಹಿಸುತ್ತಾರೆ. ನಾವು ಬಾಲ್ಯದಿಂದಲೂ ಈ ದೇವಾಲಯದ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ ಎಂದು ತಿಳಿಸಿದರು.

ಶಿವಮೊಗ್ಗ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೋ ಅವರು ಆಶೀರ್ವಚನ ನೀಡಿದರು. ಕಾರ್ಯಕ್ರಮದ ನೇತೃತ್ವವನ್ನು ಪ್ರಧಾನ ಗುರುಗಳಾದ ಫಾದರ್ ಕೆ.ಎ. ಜಾರ್ಜ್ ಅವರು ವಹಿಸಿದ್ದರು.ಮಹೋತ್ಸವವು ಧ್ವಜಾರೋಹಣದೊಂದಿಗೆ ಆರಂಭಗೊಂಡು ಸೆಪ್ಟೆಂಬರ್ 7ರವರೆಗೆ ಸಂಜೆ 5.30ಕ್ಕೆ ನವ ದಿನಗಳ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನಂತರ ಹೂವಿನ ರಥೋತ್ಸವ ನಡೆಯುತ್ತದೆ.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಕೆ.ಜಿ.ಸಿದ್ದೇಶ್, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಸಂತೋಷ ನೋಟದರ್ ಗುತ್ತೂರು ಹಾಲೇಶಗೌಡ್ರು, ಎನ್.ಜಿ. ಪಟ್ಟಸ್ವಾಮಿ, ಪೇಪರ್ ಚಂದ್ರಣ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.

error: Content is protected !!