ರಾಣೇಬೆನ್ನೂರು: `ಗೃಹಲಕ್ಷ್ಮಿ ‘ ಗೆ ಶಾಸಕ ಪ್ರಕಾಶ ಕೋಳಿವಾಡ ಚಾಲನೆ

ರಾಣೇಬೆನ್ನೂರು: `ಗೃಹಲಕ್ಷ್ಮಿ ‘ ಗೆ ಶಾಸಕ ಪ್ರಕಾಶ ಕೋಳಿವಾಡ ಚಾಲನೆ

ರಾಣೇಬೆನ್ನೂರು, ಆ. 30- ಮೈಸೂರಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆ ಬಿಡುಗಡೆ ಮಾಡುತ್ತಿದ್ದಂತೆ,  ರಾಣೇಬೆನ್ನೂರಿನ ಎಪಿಎಂಸಿ ಸಭಾಭವನದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಸರ್ಕಾರ ನಾಲ್ಕು  ಗ್ಯಾರಂಟಿಗಳನ್ನು ಕೊಟ್ಟಿದ್ದು ಡಿಸೆಂಬರ್‌ನಲ್ಲಿ ಯುವನಿಧಿ ಗ್ಯಾರಂಟಿ ಜಾರಿ ಆಗಲಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆಯುತ್ತಿದೆ. ನಾನು ಚುನಾವಣೆಯಲ್ಲಿ ಕೊಟ್ಟ ನನ್ನ ಗ್ಯಾರಂಟಿಗಳಲ್ಲಿ ಕೈಗಾರಿಕಾ ಸಚಿವರ ಜೊತೆ ಚರ್ಚೆ ಮಾಡಿದ್ದು, ಶೀಘ್ರವೇ ರಾಣೇಬೆನ್ನೂರಿನಲ್ಲಿ ಉದ್ಯೋಗ ಸೃಷ್ಠಿಯಾಗಲಿವೆ. ಪ್ರತಿ ಗ್ರಾಪಂಗೆ ಔಷಧಿ ಸಿಂಪರಣೆಗೆ ದ್ರೋಣ್‌  ಹಾಗೂ ತರಬೇತಿ ಪ್ರಾರಂಭವಾಗಿದೆ ಎಂದು ಶಾಸಕರು ಹೇಳಿದರು.

ಮಳೆ ಕೊರತೆಯಿಂದ ಬರಗಾಲದ ಛಾಯೆ ಬರುವುದರೊಳಗೆ ಇನ್ನು ನಾಲ್ಕಾರು ದಿನಗಳೊಳಗೆ ಜಿಲ್ಲೆಯಲ್ಲಿ ಎರಡು ದಿನ ಮೋಡ ಬಿತ್ತನೆ ಮಾಡಿ ವರುಣ ದೇವನ ಕೃಪೆ ಒಲಿಸಿಕೊಂಡು ಮಳೆ ತರಿಸಿ ರೈತರ ಮುಖದಲ್ಲಿ ಕಳೆ ತರುವ ಕಾರ್ಯದೊಂದಿಗೆ ನಾನು ನುಡಿದಂತೆ ನಡೆಯುತ್ತೇನೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಶಿರಹಟ್ಟಿ, ಪೌರಾಯುಕ್ತ ಕುಮ್ಮಣ್ಣನವರ, ಇಓ ಸುಮಲತಾ ಮತ್ತಿತರೆ ಅಧಿಕಾರಿಗಳಿದ್ದರು.

error: Content is protected !!