ರಾಣೇಬೆನ್ನೂರಿನಲ್ಲಿ ಶ್ರೀ ಜಿವ್ಹೇಶ್ವರ ಜಯಂತ್ಯೋತ್ಸವ

ರಾಣೇಬೆನ್ನೂರಿನಲ್ಲಿ ಶ್ರೀ ಜಿವ್ಹೇಶ್ವರ ಜಯಂತ್ಯೋತ್ಸವ

ರಾಣೇಬೆನ್ನೂರು, ಆ. 29- ನಗರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಸ್ವಕುಳ ಸಾಳಿ ಸಮಾಜದ ಮೂಲಪುರುಷ ಭಗವಾನ್ ಶ್ರೀ ಜಿವ್ಹೇಶ್ವರ ಸ್ವಾಮಿಯ ಜಯಂತ್ಯೋತ್ಸವವನ್ನು ಇಂದು ಆಚರಿಸಲಾಯಿತು.

ಮುಂಜಾನೆ 6-30ಕ್ಕೆ ಅಭಿಷೇಕ, ಕಾಕಡಾರತಿ, ಪೂಜೆಯ ನಂತರ ಜಿವ್ಹೇಶ್ವರ ಸ್ವಾಮಿಯ ಪಾಲಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಮರಳಿತು. ಪಾಲಕಿ ಉತ್ಸವದಲ್ಲಿ ದಾರಿಯುದ್ದಕ್ಕೂ ಮಹಿಳೆಯರು ಭಜನೆಗಳೊಂದಿಗೆ ನೃತ್ಯ ಮಾಡುತ್ತಾ ಸಾಗಿದ್ದ ದೃಶ್ಯ ಮನೋಹರವಾಗಿತ್ತು. ಪಾಲಕಿ ಉತ್ಸವದ ನಂತರ ಶ್ರೀ ಸ್ವಾಮಿಗೆ ತೊಟ್ಟಿಲು ಉತ್ಸವ, ಮಹಿಳೆಯರಿಗೆ ಉಡಿತುಂಬುವುದು ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಖಂಡ್ಯಪ್ಪ ರೋಖಡೆ ವಹಿಸಿದ್ದರು.

ವೇದಿಕೆಯಲ್ಲಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ತಾರಾಬಾಯಿ ಕ್ಷೀರಸಾಗರ ಹಾಗೂ ಯುವಕ ಮಂಡಳಿಯ ಅಧ್ಯಕ್ಷ ಭರತ್ ಏಕಬೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ನಾಗವೇಣಿ ಪಾಣಿಭಾತೆ ನೇತೃತ್ವದಲ್ಲಿ ರಕ್ಷಾಬಂಧನ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನಡೆಯಿತು.  

ಶ್ರೀಮತಿ ಭಾರತಿ ಏಕಬೋಟೆ ಸ್ವಾಗತಿಸಿದರು. ವಿಠ್ಠಲ್‍ರಾವ್ ಏಕಬೋಟೆ ವಂದಿಸಿದರು.

ಸಮಾಜದ ಹಿರಿಯರಾದ ಶ್ರೀಕಾಂತ ಕ್ಷೀರಸಾಗರ, ರಾಮಕೃಷ್ಣ ತಾಂಬೆ, ನಾರಾಯಣಪ್ಪ ಪಾಣಿಭಾತೆ, ವೆಂಕಟೇಶ ಏಕಬೋಟೆ, ವಿಠ್ಠಲ್ ಏಡಕೆ, ದೇವೇಂದ್ರಪ್ಪ ರೋಖಡೆ, ನಾಮದೇವ ಜಿಂದೆ, ಹರೀಶ ದಿವಟೆ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!