ಮಲೇಬೆನ್ನೂರು : ಭದ್ರಾ ಆರ್‌2ಗೆ ಶಾಸಕ ಬಿ.ಪಿ.ಹರೀಶ್, ದ್ಯಾವಪ್ಪ ರೆಡ್ಡಿ ಭೇಟಿ

ಮಲೇಬೆನ್ನೂರು : ಭದ್ರಾ ಆರ್‌2ಗೆ  ಶಾಸಕ ಬಿ.ಪಿ.ಹರೀಶ್, ದ್ಯಾವಪ್ಪ ರೆಡ್ಡಿ ಭೇಟಿ

ಮಲೇಬೆನ್ನೂರು, ಆ.29- ಭದ್ರಾ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ಕನಿಷ್ಟ ಪ್ರಮಾಣದ ನೀರು ಬರದಿರುವುದನ್ನು ಗಮನಿಸಿದ ಶಾಸಕ ಬಿ.ಪಿ.ಹರೀಶ್, ಭದ್ರಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪರೆಡ್ಡಿ ಅವರು ಬಸವಾಪಟ್ಟಣ ಬಳಿ ಇರುವ ಆರ್‌2ಗೆ ಭೇಟಿ ನೀಡಿ, ನೀರಿನ ಮಟ್ಟ ವೀಕ್ಷಿಸಿದರು.

ದಾವಣಗೆರೆ ಮತ್ತು ಮಲೇಬೆನ್ನೂರು ವಿಭಾಗಗಳ ನಾಲೆಗಳಿಗೆ ನೀರನ್ನು ವಿಭಜಿಸುವ ಆರ್‌2 ಗೇಟ್‌ನಲ್ಲಿ ಮಲೇಬೆನ್ನೂರು ವಿಭಾಗದ ನಾಲೆಗೆ 13.6 ಅಡಿ ನೀರು ಹರಿಯಬೇಕು. ಆದರೆ, 12.8 ಅಡಿ ನೀರು ಹರಿಯುತ್ತಿದೆ ಎಂದು ಶಾಸಕ ಹರೀಶ್ ಅವರು ಭದ್ರಾ ಎಸ್‌ಇ ಅವರಿಗೆ ಮೊಬೈಲ್ ಮೂಲಕ ಪ್ರಶ್ನಿಸಿದರು.

ನಮ್ಮ ವಿಭಾಗದ ನಾಲೆಗೆ ಬರಬೇಕಾದ ನೀರಿನ ಪ್ರಮಾಣವನ್ನು ಹರಿಸಲು ತಕ್ಷಣ ಗಮನಹರಿಸಬೇಕೆಂದು ಹರೀಶ್ ಮತ್ತು ದ್ಯಾವಪ್ಪರೆಡ್ಡಿ ಹಾಗೂ ರೈತ ಸಂಘದ ನಂದಿತಾವರೆ ಮುರುಗೇಂದ್ರಯ್ಯ ಅವರು ಸ್ಥಳದಲ್ಲಿದ್ದ ಎಇಇ ಧನಂಜಯ ಅವರಿಗೆ ಖಡಕ್ಕಾಗಿ ಹೇಳಿದರು.

error: Content is protected !!