`ಆರುಷಿ ಮೈ ಡಾಟರ್’ ಯೋಜನೆ ಜಾರಿಗೆ ಒತ್ತಾಯಿಸಿ ಕನ್ಯಾಕುಮಾರಿ – ದೆಹಲಿ ಪಾದಯಾತ್ರೆ

`ಆರುಷಿ ಮೈ ಡಾಟರ್’ ಯೋಜನೆ  ಜಾರಿಗೆ  ಒತ್ತಾಯಿಸಿ  ಕನ್ಯಾಕುಮಾರಿ – ದೆಹಲಿ ಪಾದಯಾತ್ರೆ

ಹೊನ್ನಾಳಿ, ಆ.28- ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರಮಟ್ಟದಲ್ಲಿ ಗರ್ಭಿಣಿ  ನೋಂದಣಿ ಕಡ್ಡಾಯ  ಕಾಯ್ದೆ ಜಾರಿಗೆ ತಂದು `ಆರುಷಿ ಮೈ ಡಾಟರ್’ ಯೋಜನೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಕನ್ಯಾಕುಮಾರಿಯಿಂದ ರಾಷ್ಟ್ರಪತಿ ಭವನ, ದೆಹಲಿ ವರೆಗೆ ಪಾದಯಾತ್ರೆ  ಮೂಲಕ ಕೇಂದ್ರ ಸರ್ಕಾರಕ್ಕೆ 10ನೇ ಬಾರಿಗೆ ಮನವಿಯನ್ನು ನೀಡುವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ರಕ್ಷಣೆ ಮತ್ತು ಸಹಕಾರ ನೀಡುವಂತೆ ಶಾಸಕ ಡಿ.ಜಿ. ಶಾಂತನಗೌಡರಿಗೆ ಮನವಿ ಮಾಡಲಾಯಿತು.

ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಚನ್ನೇಶ, ಹೋರಾಟ ಮಾಡುತ್ತಿರುವುದು ಹೊನ್ನಾಳಿಗೆ ಹೆಮ್ಮೆ ತರುವ ವಿಷಯವಾಗಿದೆ, ಇವರ ರಕ್ಷಣೆಯ ಹೊಣೆ ನಮ್ಮ ರಾಜ್ಯ ಸರ್ಕಾರದ್ದಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ರಕ್ಷಣಾ ಇಲಾಖೆಯ ಅಧಿಕಾರಿಗಳ ಜೊತೆ ವಿಷಯವನ್ನು ತಿಳಿಸಿ ಸೂಕ್ತ ರಕ್ಷಣೆ ಕೊಡಿಸುವ ಬಗ್ಗೆ ಭರವಸೆ ನೀಡಿದರು. ಸಭೆಯಲ್ಲಿ   ಸಾಸ್ವೆಹಳ್ಳಿ   ಗ್ರಾ.ಪಂ. ಸದಸ್ಯೆ ರೇಣುಕ, ಬೆಳಗುತ್ತಿ     ಗ್ರಾ.ಪಂ.   ಉಪಾ ಧ್ಯಕ್ಷ  ನಾಗರಾಜ್  ಹಾಗೂ ರವಿ ನ್ಯಾಮತಿ ಇವರು ಮಾತನಾಡಿ, ತಾಲ್ಲೂಕಿನ ಸರ್ವರು ಆರುಷಿ ಯೋ ಜನೆಗೆ ಸಹಕಾರ ಮತ್ತು ಬೆಂಬಲವನ್ನು ನೀಡುವಂತೆ ಕೋರಿರುತ್ತಾರೆ.  ಹೊನ್ನಾಳಿ ತಹಶೀಲ್ದಾರ್ ಕೆ.ಆರ್. ಬಸವರಾಜಪ್ಪ, ಸಾಸ್ವೆಹಳ್ಳಿ ಈರಣ್ಣ, ಬೆನಕನಹಳ್ಳಿ ಪರಮೇಶ್,  ಮಲ್ಲಿಗೇನಹಳ್ಳಿ, ಬಸವರಾಜಪ್ಪ,    ರೇಖಾ,     ಶ್ವೇತಾ, ಚಂದ್ರಕಲಾ ಕಾರಿಗ ನೂರು, ದಿನೇಶ್, ಮಂಜಾನಾಯ್ಕ, ಸುರೇಶ್‌ನಾಯ್ಕ, ರವಿಶಂಕರ್, ಮೋಹನ್, ಮಂಜು ಮಾರಿಕೊಪ್ಪ, ಜಗದೀಶ್ ಆಚಾರ್, ಯೋಗರಾಜ್ ಮತ್ತಿತರರಿದ್ದರು.

error: Content is protected !!