ರಾಣೇಬೆನ್ನೂರು, ಆ.28- ನಗರದ ಕೆ.ಎಲ್.ಇ. ಸಂಸ್ಥೆಯ ರಾಜ ರಾಜೇಶ್ವರಿ ಅಂಗ ಸಂಸ್ಥೆಗಳು ಮತ್ತು ಶ್ರೀ ಕೆ.ಎಫ್. ಪಾಟೀಲ್ ಚಾರಿಟಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ದಿ.ಕೆ.ಎಫ್.ಪಾಟೀಲರ 28 ನೇ ಪುಣ್ಯಸ್ಮರಣಿ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಗಳಾಗಿ ಟ್ರಸ್ಟ್ ಜಂಟಿ ಕಾರ್ಯದರ್ಶಿ ಆರ್.ಜಿ. ಹುಲುಮನಿ ಪೂಜೆ ನೆರವೇರಿಸಿ ಮಾತನಾಡುತ್ತಾ, ದಿ.ಪಾಟೀಲರ ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ಹಾಗೂ ಶೈಕ್ಷಣಿಕ ಕೊಡುಗೆಯನ್ನು ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವ್ಹಿ.ಪಿ.ಲಿಂಗನಗೌಡ ಮಾತನಾಡಿ, ದಿ. ಪಾಟೀಲ ಅವರ ಜೀವನ ಸಾಧನೆಗಳು ಸದಾ ನಮಗೆ ಪ್ರೇರಣೆ ಎಂದರು.
ಕೆ.ಎಲ್.ಇ. ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ವೀರಣ್ಣ ಅಂಗಡಿ, ವಿಭಾಗಗಳ ಮುಖ್ಯಸ್ಥರಾದ ನಾರಾಯಣ ನಾಯಕ ಎ, ಡಾ. ಎಂ.ಪಿ. ಮಾಗನೂರ, ಸುಧಾ ಕೋಟಿಹಾಳ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು. ಪ್ರೊ. ವಿದ್ಯಾಶ್ರೀ ದಾಮೋ ದರ ಪ್ರಾರ್ಥಿಸಿದರು. ಪ್ರೊ. ಸಾಯಿಲತಾ ಮಡಿವಾಳರ ನಿರೂಪಿಸಿದರು.