ಹೊನ್ನಾಳಿ, ಆ. 27 – 1986 ರಲ್ಲಿ ಸುತ್ತೂರು ಮಠದ ಲಿಂ. ಶ್ರೀ ರಾಜೇಂದ್ರ ಮಹಾಸ್ವಾಮೀಜಿಗಳವರಿಂದ ಶರಣ ಸಾಹಿತ್ಯ ಪರಿಷತ್ ಪ್ರಾರಂಭವಾಗಿದ್ದು,ಇದರ ಮೊದಲ ಅಧ್ಯಕ್ಷರಾಗಿ ಹೊನ್ನಾಳಿ ತಾಲ್ಲೂಕಿನ ಸಾಹಿತಿ ಹೆಚ್.ತಿಪ್ಪೇರುದ್ರ ಸ್ವಾಮಿಯವರನ್ನು ನೇಮಕ ಮಾಡಲಾಗಿತ್ತು ಎಂಬುದಾಗಿ ವಿಶ್ರಾಂತ ಉಪನ್ಯಾಸಕ ಯುಎನ್ ಸಂಗನಾಳ್ ಮಠ ಹೇಳಿದರು.
ಅವರು ಅಕ್ಕಮಹಾದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್, ಹೊನ್ನಾಳಿ ಮಹಿಳಾ ಕದಳಿ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಚನಸಾಹಿತ್ಯ ಸಂಸ್ಥಾಪನಾ ದಿನಾಚರಣೆಯ ದಾವಣಗೆರೆ ಉಮಾ ಲಿಂಗರಾಜ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶರಣ ಸಾಹಿತ್ಯವು ಕ್ರಮೇಣ ವಚನ ಸಾಹಿತ್ಯ ಪರಿಷತ್ ಮೂಲಕ ಶ್ರೀಮಂತಗೊಳ್ಳಲು ಕಾರಣವಾಗಿದ್ದು, ಇದನ್ನು ಮತ್ತಷ್ಟು ಜನತೆಗೆ ಹತ್ತಿರವಾಗಿಸುವ ಸಲುವಾಗಿ ಶರಣ ಸಾಹಿತ್ಯವನ್ನು ನಾಲ್ಕು ಭಾಗವಾಗಿಹಿಸಿ ಆರಂಭದಲಿ ಶರಣ ಸಾಹಿತ್ಯದ ಸಂಶೋಧನೆ, ಅದರ ಸಂರಕ್ಷಣೆ, ಪ್ರಕಟಣೆ, ಅಂತಿಮವಾಗಿ ವಚನಗಳ ಪರಿಣಾಮಕಾರಿಯಾಗಿ ಪ್ರಚಾರಗೊಳಿಸುವುದು ಮುಖ್ಯ ಉದ್ದೇಶವಾಗಿತ್ತೆಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಪಿ. ದೇವೇಂದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಶಂಕರಸ್ವಾಮಿ ವಹಿಸಿದ್ದರು. ಕಡದಕಟ್ಟಿ ತಿಮ್ಮಪ್ಪನವರಿಂದ ವಚನಗಾಯನ ನಡೆಯಿತು. ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಶಾರದ ಕೊಣಗೊಟಗೆ, ಮಹಿಳಾ ಕದಳಿ ಘಟಕದ ಅಧ್ಯಕ್ಷೆ ಪ್ರತಿಮಾ ನಿಜಗುಣ, ಕಸಾಪ ಅಧ್ಯಕ್ಷ ಮುರುಗೇದ್ರಯ್ಯ, ಸಿದ್ದಯ್ಯ, ಪದಾಧಿಕಾರಿಗಳಾದ ಸುಮಾ ರವಿಕುಮಾರ, ವೀಣಾ ಸುರೇಶ್, ರಾಜೇಶ್ವರಿ, ಅಶ್ವಿನಿ, ಷಹಜಾನ್ ಇನ್ನಿತರಿದ್ದರು.