ಕಾಗಿನೆಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ
ಹರಿಹರ, ಅ. 27 – ಭಾಷಣಗಳಲ್ಲಿ ಸಾವಿರಾರು ವಿಚಾರಗಳಿದ್ದರೂ ಸಹ, ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಶಗಳಿಗೆ ಮಹತ್ವ ಇದೆ. ಅವು ದಾಖಲೆಗಳಾಗಿ ಉಳಿದುಕೊಳ್ಳುತ್ತವೆ ಎಂದು ಕಾಗಿನೆಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಅಪ್ರತಿಮ ಕೆಲಸ ಮಾಡಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಮಾಜದಲ್ಲಿ ನಡೆಯುವ ಅಂಕು ಡೊಂಕುಗಳನ್ನು ತಿದ್ದಿ ಸಮಾಜದಲ್ಲಿ ಉತ್ತಮ ಬೆಳಕನ್ನು ಚೆಲ್ಲುತ್ತಾರೆ ಎಂದವರು ಹೇಳಿದರು.
ಪತ್ರಕರ್ತರ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡಿ, ಅವರ ಏಳಿಗೆಗೆ ಕನಕ ಗುರುಪೀಠ ಸಂಪೂರ್ಣ ಸಹಕಾರ ನೀಡುತ್ತದೆ ಎಂದೂ ಶ್ರೀಗಳು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶಿವಕುಮಾರ್ ಕಣಸೋಗಿ ಮಾತನಾಡಿ, ಪತ್ರಕರ್ತರಿಗೆ ಭದ್ರತೆಯ ಕೊರತೆ ಇದೆ. ಪ್ರತಿನಿತ್ಯ ಹಲವಾರು ಸವಾಲುಗಳನ್ನು ಎದುರಿಸಬೇಕಿದೆ. ಇದರ ನಡುವೆಯೂ, ಜನಪರ ಕಾಳಜಿ ತೋರುವ ಕರ್ತವ್ಯ ಪತ್ರಕರ್ತರ ಮೇಲಿದೆ ಎಂದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಸ್ಥಳೀಯ ಪತ್ರಕರ್ತರಿಗೆ ನಿವೇಶನ ಕೊಡಿಸುವ ಮೂಲಕ ನೆರವಾಗಲು ಶ್ರಮಿಸುವುದಾಗಿ ಹೇಳಿದರು.
ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶೇಖರಗೌಡ ಮಾತನಾಡಿ, ರಾಜ್ಯದಲ್ಲಿ 8 ಸಾವಿರ ಪತ್ರಕರ್ತರನ್ನು ಒಳಗೊಂಡ ಸಂಘ ಇದೆ. ಆದರೆ, ಸ್ಥಳೀಯ ಪತ್ರಕರ್ತರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ವಿಷಾದಿಸಿದರು.
ಹರಿಹರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಶಾಂಭವಿ ಡಿ.ಜಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್, ನಗರಸಭೆ ಸದಸ್ಯ ಮುಜಾಮಿಲ್ ಬಿಲ್ಲು, ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಾಂಭವಿ
ಡಿ.ಜಿ. ನಾಗರಾಜ್, ಕಾರ್ಯದರ್ಶಿ ಹೆಚ್.ಸಿ. ಕೀರ್ತಿಕುಮಾರ್, ಪತ್ರಕರ್ತರಾದ ಶೇಖರಗೌಡ ಪಾಟೀಲ್, ಟಿ. ಇನಾಯತ್, ಎಂ ಚಿದಾನಂದ ಕಂಚಿಕೇರಿ, ಸಿದ್ದಲಿಂಗಸ್ವಾಮಿ, ಹೆಚ್.ಸುಧಾಕರ, ಜಿಗಳಿ ಪ್ರಕಾಶ್, ಚಂದ್ರಶೇಖರ್ ಬಿಳೆಬಾಳ, ಆರ್.ಮಂಜುನಾಥ್, ಪ್ರವೀಣ್ ಕುಮಾರ್, ಪಂಚಾಕ್ಷರಿ ಜಿ.ಕೆ. ಕೃಷ್ಣ ರಾಜೊಳ್ಳಿ, ವಿಶ್ವನಾಥ ಮೈಲಾಳ್, ಕುಣೆಬೆಳಕೆರೆ ಸುರೇಶ್, ಸದಾನಂದ ಮಲೇಬೆನ್ನೂರು, ಕುಮಾರ್ ಗಂಗನಹರಸಿ, ಮಂಜುನಾಥ್ ರಾಜನಹಳ್ಳಿ, ಸಂತೋಷ ನೋಟದರ್, ಚಂದ್ರಶೇಖರ್ ಕುಂಬಾರ, ಇರ್ಫಾನ್, ವೈ ನಾಗರಾಜ್, ಮುಖಂಡರಾದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ಟಪ್ಪ, ಮಾಜಿ ದೂಡ ಸದಸ್ಯ ಹೆಚ್.ನಿಜಗುಣ, ಆರೋಗ್ಯ ಇಲಾಖೆಯ ಉಮ್ಮಣ್ಣ, ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ. ರೇವಣನಾಯ್ಕ್, ಕಾಂಗ್ರೆಸ್ ಮಾಜಿ ವಕ್ತಾರ ಎಂ.ಬಿ. ಅಣ್ಣಪ್ಪ, ಇಂಜಿನಿಯರ್ ಸೋಮಶೇಖರ್ ಗೌಡ, ಲೈಬ್ರರಿ ರವಿಕುಮಾರ್, ಕಚೇರಿಯ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.