ಮೇರಾ ಮಿಟ್ಟಿ-ಮೇರಾ ದೇಶ್‌ಗೆ ಸಿದ್ಧಗಂಗಾ ಗೈಡ್ಸ್‌ನಿಂದ ಕಳಸ ಸಮರ್ಪಣೆ

ಮೇರಾ ಮಿಟ್ಟಿ-ಮೇರಾ ದೇಶ್‌ಗೆ ಸಿದ್ಧಗಂಗಾ ಗೈಡ್ಸ್‌ನಿಂದ ಕಳಸ ಸಮರ್ಪಣೆ

ದಾವಣಗೆರೆ, ಆ. 27- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ಶ್ರೀ ಸಿದ್ದಗಂಗಾ ಸ್ಥಳೀಯ ಸಂಸ್ಥೆ ದಾವಣಗೆರೆ ಜಿಲ್ಲೆಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ `ಮೇರಾ ಮಿಟ್ಟಿ, ಮೇರಾ ದೇಶ್’ ಎಂಬ ಮಹಾನ್‌ ಕಾರ್ಯಕ್ಕೆ ಪಂಚ ಕಳಸಗಳಲ್ಲಿ ಶಾಲೆಯ ಆವರಣದ ಪವಿತ್ರ ಮಣ್ಣು ತುಂಬಿ ಕಳಸಗಳನ್ನು ಕಾರ್ಯಕಾರಿ ಸಮಿತಿ ಛೇರ್ಮನ್ ಶ್ರೀಮತಿ ಜಸ್ಟಿನ್ ಡಿ’ಸೌಜ, ಕಾರ್ಯದರ್ಶಿ ಮಹೇಶ್ ಎಂ.ಸಿ ಮತ್ತು ಎಲ್.‌ ಟಿ. ಶಶಿಕಲಾ‌ ಇವರು ಸಿದ್ಧಗಂಗಾ ಗೈಡ್ಸ್‌ನ ಹರ್ಷಿತ, ಬೀಬಿ ಜೈನಾಬ್‌, ಮಾನಸ, ಶ್ರೇಯಾ, ಜೀವಿಕಾ ಇವರುಗಳಿಗೆ ನೀಡಿದರು. 

ಇವುಗಳನ್ನು ಜಿಲ್ಲಾ ಸಂಸ್ಥೆಗೆ ತಲುಪಿಸಲು ಗೈಡ್ಸ್ ಮಕ್ಕಳಿಗೆ ಹೇಳಿದರು. ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿಯವರಿಗೆ ಸಿದ್ಧಗಂಗಾ ಗೈಡ್ಸ್‌ನವರು ಈ ಕಳಸಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ರತ್ನ ಎಂ., ಜಂಟಿ ಕಾರ್ಯದರ್ಶಿ ಸುಖವಾಣಿ ಹಾಗೂ ಶ್ರೀಮತಿ ನೀಲಮ್ಮ ಉಪಸ್ಥಿತರಿದ್ದರು.

error: Content is protected !!