ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ

ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ

ಮಲೇಬೆನ್ನೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ದಂಡಿ ತಿಪ್ಪೇಸ್ವಾಮಿ 

ಮಲೇಬೆನ್ನೂರು, ಆ.25- ಕ್ರೀಡೆ ಮಕ್ಕಳ ಅಭಿವೃದ್ಧಿಗೆ ಪೂರಕವಾಗಿದ್ದು, ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂಬ ವಾಣಿಯಂತೆ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಕಲಿಯಲು ದೈಹಿಕ ಶಿಕ್ಷಣ ಬಹಳ ಮುಖ್ಯ ಎಂದು ಮಲೇಬೆನ್ನೂರು ಎಸ್‌ಬಿಕೆಎಂ ಶಾಲೆಯ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ ಹೇಳಿದರು.

ಅವರು ಕುಂಬಳೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಲೇಬೆನ್ನೂರು ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಿಆರ್‌ಪಿ ಬಸವರಾಜಯ್ಯ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಹೆಚ್ಚು ತೊಡಗಿಸಿಕೊಳ್ಳಬೇಕೆಂದರು.

ಪುರಸಭೆ ಸದಸ್ಯೆ ಸುಲೋಚನಮ್ಮ ಓ.ಜಿ.ಕುಮಾರ್, ಮಾಲತೇಶ ಶಾಲೆಯ ಟ್ರಸ್ಟಿ ಭಾನುಪ್ರಕಾಶ್ ಕ್ರೀಡಾಕೂಟ ಉದ್ಘಾಟಿಸಿ, ಶುಭ ಕೋರಿದರು.

ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಾದ ಡಿ.ಕೆ.ಕರಿಬಸಪ್ಪ, ಮೊಹಮದ್ ಖಲೀಲ್, ಶಶಿಕುಮಾರ್, ನಾಗರಾಜ್, ಶ್ರೀಮತಿ ಜ್ಯೋತಿ, ಸಿಆರ್‌ಪಿ ರೇಷ್ಮಾ ಬಾನು, ನಂಜುಂಡಪ್ಪ, ಜಿ.ಹಾಲಪ್ಪ, ಶಿವಕುಮಾರ್, ಬೆಣ್ಣೆಹಳ್ಳಿ ಬಸವರಾಜ್ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!