ಹರಪನಹಳ್ಳಿ ಶಾಸಕರಿಗೆ ಮನವಿ
ಹರಪನಹಳ್ಳಿ, ಆ. 23 – ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇ ರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ರವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅತಿಥಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ರಾಜು ಕಡತಿ ಮಾತನಾಡಿ ಅತಿಥಿ ಶಿಕ್ಷಕರು ರಾಜ್ಯದಲ್ಲಿ ಸುಮಾರು 33 ಸಾವಿರಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಸರ್ಕಾರವು ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಆದರೆ ಅತಿಥಿ ಶಿಕ್ಷಕರ ವಿವಿಧ ಬೇಡಿಕೆ ಹಾಗೂ ಸಮಸ್ಯೆಗಳನ್ನು ಈಡೇರಿಸುತ್ತಿಲ್ಲ, ಹಲವಾರ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಗ್ರಹಿಸಿದರು.
ಅತಿಥಿ ಶಿಕ್ಷಕರಿಗೆ ಸೇವಾ ಹಿರಿತನದ ಆಧಾರದ ಮೇಲೆ ಪರಿಗಣಿಸಬೇಕು, ಮೆರಿಟ್ ಪದ್ದತಿಯನ್ನು ತೆಗೆದು ಹಾಕಬೇಕು, ಎಲ್ಲಾ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ನೀಡಬೇಕು, ಸರ್ಕಾರಿ ಶಿಕ್ಷಕರಂತೆ ನಮಗೂ ಸಹ ಮಧ್ಯಂತರ ರಜೆ ಮತ್ತು ಬೇಸಿಗೆ ರಜೆಯಲ್ಲಿ ವೇತನ ನೀಡಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ನಂದೀಶ್ ಆಚಾರಿ, ಕೆ.ಎಂ.ಕೇದಾರಸ್ವಾಮಿ, ಮಂಜಪ್ಪ, ಸಂತೋಷ, ಕವಿತಾ, ಗೀತಾ, ಉಮಾ, ಕೆ.ಶಿವಣ್ಣ, ನಾಗರಾಜ ಆಚಾರಿ, ಗೋಪಿನಾಯ್ಕ್, ಸತೀಶ್, ಅಹ್ಮದ್, ನಾಗಲಿಂಗಪ್ಪ, ಅಂಜಿನಪ್ಪ, ವಿನಯಕುಮಾರ್ ಸೇರಿದಂತೆ
ಇತರರು ಇದ್ದರು.