ಹರಿಹರ, ಅ. 23 – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ನಗರದಲ್ಲಿ ಲಯನ್ಸ್ ಕ್ಲಬ್ ಸದಸ್ಯರು, ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ವಿವಿಧ ಸಂಘ-ಸಂಸ್ಥೆಯವರು ಹಾಗೂ ಸಾರ್ವಜನಿಕರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಇಸ್ರೋ ಚಂದ್ರಯಾನ-3 ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಆ ಕ್ಷಣದ ಸಂಭ್ರಮವನ್ನು ಸಾರ್ವಜನಿಕರು ವೀಕ್ಷಿಸಲು ಗಾಂಧಿ ವೃತ್ತದಲ್ಲಿ ಎಲ್.ಇ.ಡಿ. ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು.
ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಇಳಿದ ತಕ್ಷಣವೇ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಪಟಾಕಿ ಸಿಡಿಸಿ ಸಿಹಿ ಹಂಚಿಕೆ ಮಾಡಿ ಭಾರತ್ ಮಾತಾಕಿ ಜೈ ಹಾಗೂ ವಿಜ್ಞಾನಿಗಳಿಗೆ ಜೈ ಎಂಬ ಘೋಷಣೆ ಕೂಗಿ ಸಂಭ್ರಮಿಸಿದರು.
ಚಂದ್ರಯಾನದ ಯಶಸ್ಸಿಗಾಗಿ ನಗರದ ಹಲವಾರು ದೇವಾಲಯಗಳಲ್ಲಿ ಪ್ರಾರ್ಥನೆ, ಹೋಮ ಹಾಗೂ ವಿವಿಧ ರೀತಿಯ ಪೂಜಾ ಕಾರ್ಯಗಳನ್ನು ಮಾಡಲಾಗಿತ್ತು.
ಸಂಭ್ರಮಾಚರಣೆಯ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್, ಚಿದಾನಂದ ಕಂಚಿಕೇರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸಚಿನ್ ಕೊಂಡಜ್ಜಿ, ಎಬಿವಿಪಿ ಮುಖಂಡ ವೀರೇಶ್ ಅಜ್ಜಣ್ಣನವರ್, ಲಯನ್ಸ್ ಕ್ಲಬ್ ಉಪಾಧ್ಯಕ್ಷ ಮಂಜುನಾಥ್ ಇ, ಹಿಂದೂ ಜಾಗರಣ ವೇದಿಕೆಯ ದಿನೇಶ್, ಸಂತೋಷ ನೋಟದವರ್, ಕಿರಣ್ ಭೂತೆ, ಸಂತೋಷ ಕಿರೋಜಿ, ಕೃಷ್ಣ ರಾಜೊಳ್ಳಿ, ಗುರುಬಸವರಾಜ್, ಅಕ್ಷೀತ್, ನಗರಸಭೆ ಸದಸ್ಯ ಎ.ಬಿ. ವಿಜಯಕುಮಾರ್, ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ರಾಜು ರೋಖಡೆ, ಚಂದ್ರಕಾಂತ, ಬಾತಿ ಚಂದ್ರಶೇಖರ್, ನಿಧಿ, ವಿಜಯಕುಮಾರ್, ಪಾಪಣ್ಣ, ಶಿವಪ್ರಕಾಶ್ ಶಾಸ್ತ್ರಿ, ಗಿರೀಶ್ ಗೌಡ, ಬಸವನಗೌಡ, ಆನಂದ್, ಮಹೇಶ್, ರವಿಕುಮಾರ್, ಬೆಣ್ಣೆ ವಿಜಯಕುಮಾರ್, ಸ್ವಾತಿ ಹನುಮಂತಪ್ಪ, ಇಂಜಿನಿಯರ್ ಮಲ್ಲಿಕಾರ್ಜುನ್ ಜೆಡಿಎಸ್ ಸಿದ್ದೇಶ್ ಮತ್ತಿತರರು ಉಪಸ್ಥಿತರಿದ್ದರು.