ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಚೆಸ್ ಪಂದ್ಯಕ್ಕೆ ಚಾಲನೆ

ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಚೆಸ್ ಪಂದ್ಯಕ್ಕೆ ಚಾಲನೆ

ಕ್ರೀಡೆಗಳಲ್ಲಿ ಸೋಲು – ಗೆಲುವು ಸಹಜ : ಕಾಲೇಜಿನ ಪ್ರಾಂಶುಪಾಲ ಡಾ.ಮುರುಗೇಶ್

ದಾವಣಗೆರೆ, ಆ. 23- ಯಾವುದೇ ಕ್ರೀಡೆ ಇರಲಿ ಸೋಲು – ಗೆಲುವು ಸಹಜ. ಸ್ಪರ್ಧೆಯಲ್ಲಿ ಬಹುಮಾನ ಬರಲೇಬೇಕೆಂದು ಅಲ್ಲ. ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಮುಖ್ಯ ಎಂದು ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಬಿ.ಮುರುಗೇಶ್ ಹೇಳಿದರು.

ನಗರದ ಜೆ.ಜೆ.ಎಂ.ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೆಳಗಾಂ ವಲಯದಿಂದ ಆಯೋಜಿಸಿದ್ದ 2023-24ನೇ ಸಾಲಿನ ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವು ಜೀವನದಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ಬಹಳ ಮುಖ್ಯ. ನಾವು ಜೀವನದಲ್ಲಿ ಯಾವುದೇ ಕೆಲಸಗಳಿಗೆ ಹೆಜ್ಜೆ ಇಡುವಾಗ ಜಾಣತನದಿಂದ, ಯೋಚಿಸಿ ಇಡಬೇಕು. ಹಾಗೆಯೇ ಈ ಚೆಸ್ ಪಂದ್ಯಾವಳಿ ಬುದ್ದಿವಂತಿಕೆಯ ಆಟ.  ಚೆಸ್ ಪಾನ್‍ಗಳನ್ನು ಬುದ್ದಿವಂತಿಕೆಯಿಂದ ಯೋಚಿಸಿ ಇಡಬೇಕಾಗುತ್ತದೆ. ಬುದ್ದಿವಂತಿಕೆಯಿಂದ ಆಟ ಆಡಿದರೆ ಗೆಲುವು ಸಾಧ್ಯ. ಚೆಸ್ ಆಟಗಾರರಾದ ನೀವು ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಮುಂದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗೆಲುವು ಸಾಧಿಸಿ, ನಿಮ್ಮ ಕಾಲೇಜಿಗೆ, ರಾಜ್ಯಕ್ಕೆ ಕೀರ್ತಿ ತರುವಂತಾಗಿರಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಕೆ.ಎನ್.ಗೋಪಾಲಕೃಷ್ಣ, ಜಿ.ಎಂ. ಫಾರ್ಮಸಿ ಕಾಲೇಜಿನ ಹನುಮಂತಪ್ಪ, ಬಾಪೂಜಿ ಡೆಂಟಲ್ ಸೈನ್ಸ್ ಕಾಲೇಜಿನ ಸಿ.ಪಿ.ಮಹೇಶ್, ನವೀನ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

error: Content is protected !!