ಕೆ.ಜಯ್ಯಪ್ಪ, ಕೆ. ಬೇವಿನಹಳ್ಳಿ ಗ್ರಾ.ಪಂ. ಅಧ್ಯಕ್ಷ

ಕೆ.ಜಯ್ಯಪ್ಪ, ಕೆ. ಬೇವಿನಹಳ್ಳಿ ಗ್ರಾ.ಪಂ. ಅಧ್ಯಕ್ಷ

ಮಲೇಬೆನ್ನೂರು, ಆ. 22- ಕೆ. ಬೇವಿನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಡ್ಲೆಗೊಂದಿಯ ಕೆ. ಜಯ್ಯಪ್ಪ ಮತ್ತು ಉಪಾಧ್ಯಕ್ಷರಾಗಿ ಕೆ. ಬೇವಿನಹಳ್ಳಿಯ ಮಂಜಮ್ಮ ಕೋಂ ಮಂಜಪ್ಪ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬಿಇಓ ಹನುಮಂತಪ್ಪ ಚುನಾವಣಾಧಿ ಕಾರಿಯಾಗಿದ್ದರು. ಪಿಡಿಓ ಲಕ್ಷ್ಮಿಬಾಯಿ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು. 

error: Content is protected !!