ರಾಣೇಬೆನ್ನೂರು ನಗರಸಭೆಯಿಂದ `ನನ್ನ ಮಣ್ಣು ನನ್ನ ದೇಶ’ ಅಭಿಯಾನ

ರಾಣೇಬೆನ್ನೂರು ನಗರಸಭೆಯಿಂದ  `ನನ್ನ ಮಣ್ಣು ನನ್ನ ದೇಶ’ ಅಭಿಯಾನ

ರಾಣೇಬೆನ್ನೂರು, ಆ.22- ನೂರಾರು ವರ್ಷಗಳ ಕಾಲ ಪರಕೀಯರ ವಶದಲ್ಲಿದ್ದ ಭಾರತವನ್ನು ತ್ಯಾಗ, ಬಲಿದಾನದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಹುತಾತ್ಮರನ್ನು ಸದಾಕಾಲ ಸ್ಮರಿಸುವುದರೊಂದಿಗೆ ಅವರಿಗೆ ಗೌರವ ಸಲ್ಲಿಸಬೇಕು ಎಂದು ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಹೇಳಿದರು. ಅವರು ಗಂಗಾಜಲ ಕೆರೆಯ ದಡದಲ್ಲಿ ನಡೆದ `ನನ್ನ ಮಣ್ಣು, ನನ್ನ ದೇಶ’ ಅಭಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾತೃಭೂಮಿಗಾಗಿ ಪ್ರತಿ ಕ್ಷಣ ಬದುಕು ನಡೆಸಿದರೆ ಸ್ವಾತಂತ್ರ್ಯ ಯೋಧರನ್ನು ಗೌರವಿಸಿದಂತಾಗುತ್ತದೆ ಎಂದು ದ್ವಜಾರೋಹಣ ನೆರವೇರಿಸಿದ ಇನ್ನೊಬ್ಬ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು. ಇದೇ ಸಂದ ರ್ಭದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ನೆನಪಿಗೆ 75 ಸಸಿಗಳನ್ನು ನೆಡಲಾಯಿತು. ನಗರಸಭೆ ಸದಸ್ಯರಾದ ಗಂಗಮ್ಮ ಹಾವನೂರ, ಕಮಲಾಕ್ಷಿ ಚಿಕ್ಕಬಿದರಿ, ಶಶಿಧರ ಬಸೇನಾಯ್ಕ, ನಾಗರಾಜ, ಮಾಜಿ ಸದಸ್ಯ ಬಸವರಾಜ ಹುಚ್ಚಗೊಂಡರ, ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ ಮತ್ತು ನಗರಸಭೆ ಸಿಬ್ಬಂದಿ ಮಧು ಮತ್ತಿತರರಿದ್ದರು.

error: Content is protected !!