ಅಡವಿಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಬಸವನಕೋಟಿ ಅನುಷಾ ನಾಗರಾಜ್‌

ಅಡವಿಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಬಸವನಕೋಟಿ ಅನುಷಾ ನಾಗರಾಜ್‌

ಹರಪನಹಳ್ಳಿ, ಆ.2- ತಾಲ್ಲೂಕಿನ ಅಡವಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಗಿ ಬಿಜೆಪಿ ಬೆಂಬಲಿತ  ಬಸವನಕೋಟಿ ಅನುಷಾ ನಾಗರಾಜ್‌ ಹಾಗೂ ಉಪಾಧ್ಯಕ್ಷ ರಾಗಿ ಹೆಚ್.ಕವಿತಾ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಚುನಾಯಿತರಾಗಿ ದ್ದಾರೆ ಎಂದು ಚುನಾವಣಾಧಿಕಾರಿ ರೇಣುಕಾದೇವಿ ತಿಳಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಬಸವನಕೋಟಿ ಅನುಷಾ ನಾಗರಾಜ್‌ ಹಾಗೂ ಮಂಗಳ ಗೌರಮ್ಮ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಚಲುವಾದಿ ಫಕ್ಕೀರಪ್ಪ ಹಾಗೂ ಹೆಚ್.ಕವಿತಾ ಸ್ಪರ್ಧಿಸಿದ್ದು, ಇವರಲ್ಲಿ ತಲಾ 13 ಮತಗಳನ್ನು ಪಡೆದ ಅನುಷಾ ನಾಗರಾಜ್ ಅಧ್ಯಕ್ಷರಾಗಿ ಹಾಗೂ ಹೆಚ್.ಕವಿತಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಒಟ್ಟು 19 ಸದಸ್ಯರು ಹಾಜರಿದ್ದರು. ಪಿಡಿಓ ರಮೇಶ್ ಹಾಗೂ ಮುಖಂಡರಾದ ಎ.ಜಿ.ಮಂಜುನಾಥ್‌, ಬೆಣ್ಣಿಹಳ್ಳಿ ಬಸವಣ್ಣ, ಬಿಲ್ ಕಲೆಕ್ಟರ್ ಬಸವರಾಜ್‌, ಜಗದೀಶ್‌, ಲಕ್ಷ್ಮೀಕಾಂತ, ಹೊಂಬಳಗಟ್ಟಿ ಮಂಜುನಾಥ್‌, ನಿಂಗರಾಜ್‌, ತಿಪ್ಪನಹಳ್ಳಿ ಮಂಜುನಾಥ್‌, ಚನ್ನಬಸಪ್ಪ, ಮಾರಪ್ಪ ಸೇರಿದಂತೆ ಇತರರು ಇದ್ದರು.

error: Content is protected !!