ದೊಡ್ಡಬಾತಿ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘಕ್ಕೆ ಆಯ್ಕೆ

ದೊಡ್ಡಬಾತಿ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘಕ್ಕೆ ಆಯ್ಕೆ

ದಾವಣಗೆರೆ, ಆ. 02 – ತಾಲ್ಲೂಕಿನ ದೊಡ್ಡಬಾತಿ ರೈಲ್ವೆ ಗೂಡ್ಸ್ ಶೆಡ್ ಲಾರಿ ಮಾಲೀಕರು ಸಂಘ ನೂತನ ಅಧ್ಯಕ್ಷರು ಹಾಗೂ ಖಜಾಂಚಿಗಳಾಗಿ ದೊಡ್ಡಬಾತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಜಿ.ಆರ್. ನಾಗರಾಜ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ ಬಿ.ವಿ. ಸಿದ್ದೇಶ್ ಮುಂದುವರೆದಿರುತ್ತಾರೆ. ಕಾರ್ಯದರ್ಶಿಗಳಾಗಿ ಪಂಚಾಕ್ಷರಿ. ಪಿ. ಈ,  ಉಪಾಧ್ಯಕ್ಷರಾಗಿ ಎಂ. ದಾದಾಪೀರ್, ನಿರ್ದೇಶಕರಾಗಿ ಸೋಗಿ ಮುರುಗೇಶ್, ಎಸ್. ಕೆ. ಮಲ್ಲಿಕಾರ್ಜುನ್, ಎಚ್. ಕೆ. ಮಂಜುನಾಥ್, ಟಿ. ಮಂಜುನಾಥ್,  ಹೊನ್ನಪ್ಪ ಇವರುಗಳು ಲಾರಿ ಮಾಲೀಕರ ಸಮ್ಮುಖದಲ್ಲಿ ಆಯ್ಕೆಯಾಗಿರುತ್ತಾರೆ

error: Content is protected !!