ಉಪಾಧ್ಯಕ್ಷರಾಗಿ ಸಿರಿಗೆರೆ ನಾಗನಗೌಡ್ರು
ದಾವಣಗೆರೆ, ಆ. 2- ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಹರಿಹರದ ಹೊನ್ನಾಳಿ ಬಾಬಣ್ಣ, ಮತ್ತು ಉಪಾಧ್ಯಕ್ಷರಾಗಿ ಹೊಳೆಸಿರಿಗೆರೆಯ ಎನ್.ಜಿ. ನಾಗನಗೌಡ್ರು ಅವರನ್ನು ಬುಧವಾರ ನಡೆದ ಜಿಲ್ಲಾ ಜನಜಾಗೃತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ, ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಜಯಕುಮಾರ್ ನಾಗನಾಳ್ ಮತ್ತು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಎಂ.ಬಿ. ನಾಗರಾಜ್, ನಿಕಟಪೂರ್ವ ಉಪಾಧ್ಯಕ್ಷ ರಾಜಶೇಖರ್ ಕೊಂಡಜ್ಜಿ, ಹಿರಿಯ ಸದಸ್ಯರಾದ ಎಸ್.ಟಿ. ಕುಸುಮಶ್ರೇಷ್ಠಿ, ಗೌಡ್ರ ಚನ್ನಬಸಪ್ಪ, ಅಣಬೇರು ಮಂಜಣ್ಣ, ಕೊಮಾರನಹಳ್ಳಿಯ ಜಿ. ಮಂಜುನಾಥ್ ಪಟೇಲ್, ಶ್ರೀಮತಿ ಶುಭ ಮರಿಯಾಚಾರಿ, ಜಯಮ್ಮ, ಚೇತನಾ ಶಿವಕುಮಾರ್, ಜಿ.ಹೆಚ್. ಮಹಾಂತೇಶ್, ಬಿ.ಎನ್. ನೇತ್ರಾವತಿ, ವಿರೂಪಾಕ್ಷಪ್ಪ, ಸಿದ್ದಯ್ಯ, ನಾಗರಾಜ್ ಕತ್ತಿಗೆ, ಮಂಜುನಾಥ್ ಸರಳಿಮನೆ, ಶ್ರೀನಿವಾಸ್ ರಾವ್, ಲಿಂಗರಾಜ್, ಎಂ.ಯು. ನಟರಾಜ್, ಜಿ.ವಿ. ರುದ್ರೇಶಪ್ಪ, ಜಿ.ಬಿ. ಯೋಗೇಶ್, ಚನ್ನಬಸಪ್ಪ, ಎಸ್. ಶರಣಪ್ಪ, ಆರ್. ಮಂಜಪ್ಪ, ಶಿವಕುಮಾರ್, ಜಗದೀಶ್, ಕೆ.ಎಂ. ಬಸವರಾಜ್, ವೈ.ಟಿ. ಮಲ್ಲಿಕಾರ್ಜುನ್, ಬೆಳ್ಳೂಡಿಯ ಗೌಡ್ರ ರವಿಶಂಕರ್, ಜಿಗಳಿ ಪ್ರಕಾಶ್ ಸಭೆಯಲ್ಲಿದ್ದರು.
ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗರಾಜ್, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿಗಳಾದ ವಸಂತ್ ದೇವಾಡಿಗ, ಗಣಪತಿ ಮಾಳಂಜಿ, ಶ್ರೀನಿವಾಸ್, ಬಾಬು, ಶ್ರೀಧರ್, ಬಾಲಕೃಷ್ಣ, ರವಿಚಂದ್ರ, ನವೀನ್ ಕುಮಾರ್, ಯಶೋಧ, ಚನ್ನಗಿರಿ ಶ್ರೀಧರ್, ಸಭೆಯಲ್ಲಿ ಹಾಜರಿದ್ದು ಯೋಜನಾ ವ್ಯಾಪ್ತಿಯಲ್ಲಿ ಮಾಡಲಾದ ಕಾರ್ಯಕ್ರಮಗಳ ವರದಿ ನೀಡಿದರು.