ವಿದ್ಯಾರ್ಥಿಗಳಲ್ಲಿ ಹವ್ಯಾಸ ಉತ್ತಮವಾಗಿರಬೇಕು

ವಿದ್ಯಾರ್ಥಿಗಳಲ್ಲಿ ಹವ್ಯಾಸ ಉತ್ತಮವಾಗಿರಬೇಕು

ಕೊಟ್ಟೂರಿನ ಕಾರ್ಯಕ್ರಮದಲ್ಲಿ ಡಾ. ಎಂ. ರವಿಕುಮಾರ

ಕೊಟ್ಟೂರು, ಆ. 1 – ಶ್ರೀ ಡಾ. ಮಹಾಂತ ಶಿವಯೋಗಿ ಯವರ ಹುಟ್ಟುಹಬ್ಬದ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆಯನ್ನು ರಾಜ್ಯ ಸರ್ಕಾ ರದ ಆದೇಶದಂತೆ ಕೊಟ್ಟೂರೇಶ್ವರ ಮಹಾ ವಿದ್ಯಾಲಯದಲ್ಲಿ ಇಂದು ಆಚರಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ|| ಎಮ್ ರವಿಕುಮಾರ್,  ಇಂದಿನ ವಿದ್ಯಾರ್ಥಿಗಳಲ್ಲಿ ಹವ್ಯಾಸಗಳು ಉತ್ತಮವಾಗಿರಬೇಕು, ದುಶ್ಚಟ ಗಳಿಗೆ ಬಲಿಯಾಗಬಾರದು. ಹಾಗಾಗಿ ಪ್ರತಿಯೊ ಬ್ಬರೂ  ಉತ್ತಮ ವ್ಯಕ್ತಿಗಳನ್ನು ಮತ್ತು ಮೌಲ್ಯಗ ಳನ್ನು ಹುಡುಕುತ್ತಾರೆ. ಹಾಗಾಗಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ದುಷ್ಟ ಚಟಗಳಿಗೆ ಬಲಿಯಾಗಬಾರದು ಎಂದು ಕರೆ ನೀಡಿದರು. 

ವಿಶೇಷ ಉಪನ್ಯಾಸ ನೀಡಿದ ಡಾ|| ಕುಸುಮ ಸಜ್ಜನ್ ಮಾತನಾಡಿ, ಇಂದಿನ ಸಮಾಜ ವ್ಯಸನ  ಮುಕ್ತ ಸಮಾಜ ಆಗಬೇಕು. ಅದೇ  ದೇಶಕ್ಕೆ ಹಿತ. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರು ಮೌಲ್ಯಗಳನ್ನು ರೂಢಿಸಿಕೊಳ್ಳುವ ಮುಖಾಂತರ  ಅನಿಷ್ಟ ವ್ಯಸನಗಳಾದ ಗುಟುಕಾ, ತಂಬಾಕು, ಮದ್ಯಪಾನ ಇಂತಹ ಚಟಗಳಿಂದ ಮುಕ್ತರಾಗಿ ಸಮಾಜದ ಅಭಿವೃದ್ಧಿಗೆ ಪ್ರತಿಯೊ ಬ್ಬರೂ ಸಹಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು. 

ಪ್ರಾಸ್ತಾವಿಕ ಭಾಷಣ ಮಾಡಿದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸಿದ್ದನಗೌಡ, ಈ ಕಾರ್ಯಕ್ರಮ ಡಾ. ಮಹಾಂತ ಶಿವಯೋಗಿ  ಯವರ ಜನ್ಮದಿನದ ಪ್ರಯುಕ್ತ  ಆಚರಣೆ ಮಾಡುವುದು ಅರ್ಥಪೂರ್ಣ ಮತ್ತು ಇಂದಿನ ಸಮಾಜಕ್ಕೆ ಅನಿವಾರ್ಯವೂ ಆಗಿದೆ.

ಕಾರ್ಯಕ್ರಮದಲ್ಲಿ  ಪ್ರೊ.ಡಿ ರವೀಂದ್ರ ಗೌಡ.  ಪ್ರೊ.ಎಸ್. ಕೃಷ್ಣಪ್ಪ, ಪ್ರೊ. ಕೆ.ಪಿ. ರಾಧಾಸ್ವಾಮಿ ಪ್ರೊ. ಬಸವರಾಜ್ ಉಪನ್ಯಾಸಕರು ಡಾ. ಶಿವಕುಮಾರ್, ಡಾ. ಪೃಥ್ವಿರಾಜ್ ಬೆಂಡರಗಿ,  ಬಸವರಾಜ ಬಣಕಾರ್ ಮತ್ತು ಎಲ್ಲ ಬೋಧಕ,  ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಾರ್ಥನೆಯನ್ನು ಡಾ|| ಪೃಥ್ವಿ ರಾಜ್. ಸ್ವಾಗತ ಪ್ರೊ. ರಾಧಾ ಸ್ವಾಮಿ. ನಿರೂಪಣೆ   ಉಪ ನ್ಯಾಸಕ ಅರವಿಂದ್ ಬಸಾಪುರ  ನೆರವೇರಿಸಿದರು.

error: Content is protected !!