ಸಾಸ್ವೇಹಳ್ಳಿ : ಮಳೆಗಾಗಿ ಕುರದ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಸಾಸ್ವೇಹಳ್ಳಿ : ಮಳೆಗಾಗಿ ಕುರದ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಸಾಸ್ವೆಹಳ್ಳಿ, ಜೂ. 20 –  ಸಮೀಪದ ಹನುಮನಹಳ್ಳಿ ಗ್ರಾಮದ ಸಮೀಪದ ಗುಡ್ಡದಲ್ಲಿ ನೆಲೆಸಿರುವ ಕುರದ ಬಸವೇಶ್ವರ ಸ್ವಾಮಿಗೆ ಮಳೆಗಾಗಿ ಗ್ರಾಮದ ಜನರು ಮೂರು ವಾರಗಳ ವೃತಾಚರಣೆ ನಡೆಸಿ, ಮೂರನೇ ಸೋಮವಾರ ಪರಾವು ನಡೆಸಿದರು. 

ಪ್ರತಿ ವರ್ಷ ಈ ವೇಳೆಗೆ ಭಿತ್ತನೆ ಕಾರ್ಯ ಮುಗಿದಿದ್ದು, ಕಳೆ, ಗೊಬ್ಬರವನ್ನು ತೆಗೆಯುತ್ತಿದ್ದೆವು. ಈ ವರ್ಷ ಮುಂಗಾರು ತಿಂಗಳಾದರೂ ಬಾರದೇ ಇರುವುದು ರೈತರಲ್ಲಿ ಆತಂಕ ಸೃಷ್ಠಿಯಾಗಿತ್ತು. 

ಮಳೆಗಾಗಿ ಗ್ರಾಮಸ್ಥರು ಗ್ರಾಮದ ಸಮೀಪದಲ್ಲಿ ನೆಲೆಸಿರುವ ಕುರದ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ನಮ್ಮಲಿ ಇದೆ. ಆ ಕಾರಣದಿಂದ ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸುತ್ತಾರೆ ಗ್ರಾ. ಪಂ ಮಾಜಿ ಸದಸ್ಯ ರಾಣವ್ವರ ಬಿ. ಹಾಲೇಶ್ ಗ್ರಾಮದಲ್ಲಿ ಮೂರು ವಾರ ಮುಂಜಾನೆ ಪೂಜೆ ಸಲ್ಲಿಸಿ, ಭಾನುವಾರ ಗ್ರಾಮದಲ್ಲಿ ಅಕ್ಕಿ, ಬೇಳೆ, ಎಣ್ಣೆ, ಸಂಗ್ರಹಿಸಿ, ಗುಡ್ಡದ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಪ್ರತಿ ವರ್ಷದಂತೆ ಮಳೆ ಉತ್ತಮವಾಗಿ ಬಂದು ಫಸಲು ಕೈ ಸೇರುವಂತೆ ಆಗಲಿ ಎಂದು ದೇವರಲ್ಲಿ ಬೇಡಿಕೊಂಡು, ಅಲ್ಲಿಯೇ ಅಡುಗೆ ತಯಾರಿಸಿ, ದೇವರಿಗೆ ನೈವೇದ್ಯ ಸಮರ್ಪಿಸಿ ಪ್ರಸಾದ ಸ್ವೀಕರಿಸಿ ದೇವರಲ್ಲಿ ಬೇಡಿಕೊಂಡೆವು ಎನ್ನುತ್ತಾರೆ ರುದ್ರೇಶ್ ಅವರು. 

ಗ್ರಾಮದ ಉತ್ಸವ ಮೂರ್ತಿಗಳಾದ ಬಸವೇಶ್ವರ ಸ್ವಾಮಿ, ಬೇಟೆ ರಂಗಪ್ಪ ದೇವತೆಗಳನ್ನು ಪೂಜೆ ಕರೆದೊಯ್ಯಲಾಗಿತ್ತು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್.ಜಿ. ರುದ್ರನ ಗೌಡ, ಶಾಂತಮ್ಮ ಹಾಗೂ ಮುಖಂಡರಾದ ಮುದ್ದಪ್ಪ, ದಾಗಿನಕಟ್ಟೆ ನಾಗರಾಜಪ್ಪ, ಎಚ್.ಜಿ. ನಾಗೇಶ್ ಗೌಡ್ರು, ನಿರಗಂಟಿ ನಾಗರಾಜಪ್ಪ, ಬಸವರಾಜಯ್ಯ ಇದ್ದರು. 

error: Content is protected !!