ಹರಿಹರದಲ್ಲಿ ಬಿತ್ತನೆ ಬೀಜ ವಿತರಣೆಯಲ್ಲಿ ಶಾಸಕ ಬಿ.ಪಿ. ಹರೀಶ್
ಹರಿಹರ, ಜೂ. 7 – ರೈತರಿಗೆ ಸರ್ಕಾರವು ರಿಯಾಯ್ತಿ ದರದಲ್ಲಿ ನೀಡುವ ಬಿತ್ತನೆ ಬೀಜಗಳನ್ನು ಪರೀಕ್ಷೆ ಮಾಡಿ ವಿತರಣೆ ಮಾಡ ಬೇಕು. ಕಳಪೆ ಬೀಜಗಳ ವಿತರಣೆ ಯಾಗಿ ರೈತರು ಸಂಕಷ್ಟ ಎದುರಿಸಿದರೆ ಅಧಿಕಾರಿಗಳನ್ನೇ ಹೊಣೆ ಮಾಡ ಲಾಗುವುದು ಎಂದು ಶಾಸಕ ಬಿ.ಪಿ. ಹರೀಶ್ ಎಚ್ಚರಿಕೆ ನೀಡಿದರು.
ನಗರದ ಎಪಿಎಂಸಿ ಆವರಣ ದಲ್ಲಿ ಇರುವ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿತರಣೆಯಲ್ಲಿ ಯಾವುದೇ ದುರ್ಬಳಕೆ, ತಾರತಮ್ಯ ಆಗದಂತೆ ವ್ಯವಸ್ಥೆ ಮಾಡಬೇಕು. ಸಂಪರ್ಕ ಕೇಂದ್ರಕ್ಕೆ ಬರುವ ರೈತರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚಿಸಿದರು. ತಾಲ್ಲೂಕಿನ ಕೆಲ ಭಾಗಗಳಲ್ಲಿ ಮಾತ್ರ ಮಳೆಯಾಗಿದೆ. ರೈತರು ಜಮೀನುಗಳನ್ನು ಸಿದ್ಧಪಡಿಸಿ ಕೊಂಡಿ ದ್ದಾರೆ. ಅವರ ಅನುಕೂಲಕ್ಕೆ ತಕ್ಕ ಹಾಗೆ ಅಧಿಕಾರಿಗಳು ಬೀಜ ವಿತರಣೆ ಮಾಡಬೇಕು ಎಂದೂ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ನಾರನಗೌಡ, ಕೃಷಿ ಅಧಿಕಾರಿಗಳಾದ ಮಲ್ಲಿಕಾ ರ್ಜುನ್, ವಿಕಾಸ್, ಅಕೌಂಟೆಂಟ್ ಪ್ರಸಾದ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿ ಮಂಜಾನಾಯ್ಕ ಹೆಚ್., ಮುಖಂಡರಾದ ವಿನಾಯಕ ಆರಾಧ್ಯಮಠ, ಹನಗವಾಡಿ ಮಂಜುನಾಥ, ಅದ್ವೈತ್ ಶಾಸ್ತ್ರಿ, ಅಶೋಕ ಕುಂಬಳೂರು, ಗಣೇಶ್, ರೈತರಾದ ಮೈಲಪ್ಪ ಎ.ಕೆ. ಬನ್ನಿ ಕೋಡು, ಅಶೋಕ ರಾಜನಹಳ್ಳಿ, ಭೀಮಪ್ಪ ಮತ್ತಿತರರಿದ್ದರು.