ದಾವಣಗೆರೆ, ಜೂ.6- ನಗರದಲ್ಲಿ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಪೊಲೀಸರು 18 ಲಕ್ಷ ರೂ. ಮೌಲ್ಯದ 7 ರಾಯಲ್ ಎನ್ಫೀಲ್ಡ್ ಮತ್ತು 5 ಸ್ಪ್ಲೆಂಡರ್ ಪ್ಲಸ್ ಬೈಕ್ಗಳು ಸೇರಿ ಒಟ್ಟು 12 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಸೂಫಿಯಾನ್ (20) ಹಾಗೂ ಖಾತ್ರಿ ಚೌಧರಿ ಯಾನೆ ಜಾವೀದ್ (24) ಎಂಬುವವರು ಬಂಧಿತರು. ಎಸ್.ಎಸ್.ಎಮ್ ನಗರದ ಈದ್ಗಾ ಮೈದಾನದ ಮುಂಭಾಗದ ಬಳಿ ಬಂಧಿಸಲಾಗಿದ್ದು, ಇವರು ಜಿಲ್ಲೆ ಹಾಗೂ ಹೊರ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಕಳೆದ ಮೇ 21ರಂದು ಆರಿಫ್ವುಲ್ಲಾ ಎಂಬುವವರು ಮಿಲ್ಲತ್ ಕಾಲೇಜು ಬಳಿಯ 7ನೇ ಕ್ರಾಸ್ ಬೀಡಿ ಲೇಔಟ್ ಮುಂಭಾಗ ತಮ್ಮ ಹಿರೋ ಸ್ಪ್ಲೆಂಡರ್ ಬೈಕ್ ಕಳುವಾಗಿದೆ ಎಂದು ಆಜಾದ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದರು.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಆಜಾದ್ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್ ಪೊಲೀಸ್ ಉಪ ನಿರೀಕ್ಷಕರುಗಳಾದ ಕಾಂತರಾಜ್ ಎಸ್. ಮತ್ತು ಶ್ರೀಮತಿ ಶೃತಿ ಎಂ., ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ ನಾಯ್ಕ್, ತಿಪ್ಪೇಸ್ವಾಮಿ, ದಯಾನಂದ, ಕೃಷ್ಣ ನಂದ್ಯಾಲ್, ಕರಿಬಸಪ್ಪ, ಪ್ರದೀಪ್ ಕುಮಾರ, ಮಡ್ಡಿ ಹನುಮಂತಪ್ಪ, ರಾಘವೇಂದ್ರ, ಶಾಂತರಾಜ್ ಇವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ ಕೆ. ಶ್ಲ್ಯಾಘಿಸಿದ್ದಾರೆ.