ಬಾಪೂಜಿ ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಸೈಕಲ್ ದಿನಾಚರಣೆ

ಬಾಪೂಜಿ ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಸೈಕಲ್ ದಿನಾಚರಣೆ

ದಾವಣಗೆರೆ, ಜೂ.6- ನಗರದ  ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ `ವಿಶ್ವ ಸೈಕಲ್ ಜಾಥಾ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಂಶುಪಾಲರಾದ ಶ್ರೀಮತಿ ವನಿತಾ ಜೆ.ಎಸ್.   ವಿದ್ಯಾರ್ಥಿಗಳ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ದೇಹ ಸದೃಢವಾಗಿದ್ದರೆ ಮನಸ್ಸು ಸದೃಢವಾಗಿರುತ್ತದೆ ಎಂಬಂತೆ ವಿದ್ಯಾರ್ಥಿಗಳು ಕ್ರಿಯಾಶೀಲ ರಾಗಿರಲು ಕೆಲವು ಕ್ರೀಡೆಗಳು ಅವಶ್ಯಕವಾಗಿದ್ದು, ಅವುಗಳಲ್ಲಿ ಸೈಕಲ್ ಓಡಿಸುವುದು ಅತ್ಯಂತ ವಿಶೇಷವಾಗಿದ್ದು, ಶಾಲೆಯ ವಿದ್ಯಾರ್ಥಿಗಳು ಬಹಳ ಸಂತೋಷವಾಗಿ ಸೈಕಲ್ ಓಡಿಸುವುದರ ಮೂಲಕ ಜಾಗೃತಿಯನ್ನು ಮೂಡಿಸಿದರು. 

ಈ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶೀಬಾರಾಣಿ, ಮಂಜಪ್ಪ, ಪ್ರಭು ಪಿ.ವಿ., ಸವಿತಾ ಆರ್., ದೈಹಿಕ ಶಿಕ್ಷಕರು ಹಾಗೂ ಇತರೆ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು.

error: Content is protected !!