ಚಳ್ಳಕೆರೆಯಲ್ಲಿ ವೈದ್ಯಾಧಿಕಾರಿ ಡಾ. ಹೆಚ್.ಸಿ. ಗುರುಪ್ರಸಾದ್
ಚಳ್ಳಕೆರೆ, ಜೂ. 6- ಒಳ್ಳೆಯ ಪರಿಸರದಿಂದ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ. ಪರಿಸರ ಸಂರಕ್ಷಣೆ ಮನೆಯಿಂದಲೇ ಪ್ರಾರಂಭವಾಗಬೇಕು. ಪ್ರಕೃತಿ ಕೊಟ್ಟಿದ್ದನ್ನು ಹಿತ-ಮಿತವಾಗಿ ಬಳಸಿಕೊಳ್ಳುವುದರೊಂದಿಗೆ ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ ಇರಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ. ಗುರುಪ್ರಸಾದ್ ತಿಳಿಸಿದರು.
ಅವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೀರಾಸಾಬಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗದವರಾದ ಸಿ.ಎನ್. ನವೀನ್ಕುಮಾರ್, ಸುಲೋಚನಮ್ಮ, ಮಂಜುಳಾ, ಶಂಕರ್, ಸ್ನೇಹಾ, ಶಬೀನಾ, ಸರೋಜಮ್ಮ, ರಾಧಮ್ಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.