ದಾವಣಗೆರೆ, ಜೂ. 1- ದವನ್ ಪದವಿ ಕಾಲೇಜಿನಲ್ಲಿ ತೃತೀಯ ಬಿಸಿಎ ವಿದ್ಯಾರ್ಥಿಗಳಿಗೆ, 2022-23 ನೇ ಸಾಲಿನ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ನಡೆಯಿತು. ನೇಮಕಾತಿಯಲ್ಲಿ ತೃತೀಯ ಬಿಸಿಎ ವಿದ್ಯಾರ್ಥಿಗಳಾದ ಎಲ್. ನಮ್ರತಾ, ಎ.ಎನ್.ಮೇಘನಾ, ಜೆ.ಎ. ವರುಣ್ ಕುಮಾರ್, ಬಿ. ಚೇತನ್, ಅಜಯ್ ಬ್ಯಾನರ್ಜಿ ಇವರುಗಳು ಮೈಸೂರಿನ ಹೆರಿನ್ ಎಲೆಕ್ಟ್ರಾನಿಕ್ಸ್ ಕಂಪನಿಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಕಾರ್ಯದರ್ಶಿಗಳಾದ ವೀರೇಶ್ ಪಟೇಲ್, ಜಂಟಿ-ಕಾರ್ಯದರ್ಶಿ ಡಾ. ಜಿ.ಎಸ್. ಅಂಜು, ನಿರ್ದೇಶಕ ಹರ್ಷರಾಜ್ ಎ. ಗುಜ್ಜರ್, ಉಪ ಪ್ರಾಚಾರ್ಯರಾದ ಪ್ರೊ. ಎನ್. ಅನಿತಾ, ನೇಮಕಾತಿ ಸಂಯೋಜನಾಧಿಕಾರಿ ಪ್ರೊ. ಬಿ.ಎಸ್. ಶ್ವೇತಾ ಅಭಿನಂದಿಸಿದ್ದಾರೆ.
January 16, 2025